ಸಮ ಸಮಾಜಕ್ಕೆ ಕನಕದಾಸರ ಕೊಡುಗೆ ಅಪಾರ ಶ್ರೀಮತಿ ಟಿ ಮಂಜುಳಾ ಶ್ರೀಕಾಂತ್.
ನಾಯಕನಹಟ್ಟಿ:
‘ಕೀರ್ತನಗಳ
ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದವರು ಕನಕದಾಸರು. ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಟಿ ಮಂಜುಳ ಶ್ರೀಕಾಂತ್ ಹೇಳಿದರು.
ಶನಿವಾರ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ 538ನೇ ಕನಕದಾಸರ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
‘ಕನಕದಾಸರು ಭಕ್ತಿ ಆರಾಧನೆಯ ಮೂಲಕ ಭಗವಂತನನ್ನು ಶ್ರೇಣಿಕೃತ
ಒಲಿಸಿಕೊಂಡು
ವರ್ಣಾಶ್ರಮ ವ್ಯವಸ್ಥೆಯನ್ನು ಪ್ರಶ್ನಿಸುವ,
ನೊಂದವರ, ಹಿಂದುಳಿದ, ದೌರ್ಜನ್ಯಕ್ಕೊಳಪಟ್ಟ ಜನರ ಪ್ರತಿನಿಧಿಯಾಗಿ ಹೊರ ಹೊಮ್ಮಿದರು ಸರಳವಾದ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳ ತಿದ್ದುವ ಕಾರ್ಯ ಮಾಡಿದರು. ಇಂತಹ ಮಹಾನ್ ವ್ಯಕ್ತಿಯ ಆದರ್ಶ ಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.
ಇದೇ ವೇಳೆಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯ ಸರ್ವ ಮಂಗಳ ಉಮಾಪತಿ ಮಾತನಾಡಿದರು. ಕನಕದಾಸರು ಪದ್ಯ ಕೀರ್ತಿಗಳ ಪ್ರಸ್ತುತ ಜೀವನಕ್ಕೂ ಅನ್ವಯ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್ ಕನಕದಾಸರು ತಮ್ಮ ಕೀರ್ತನೆಗಳಿಂದ ಸಮಾಜದ ಅಂಕುಡೊಂಕು ತಿದ್ದಿ ಭಕ್ತಿಯ ಮೂಲಕ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಪಡೆದ ಭಕ್ತ ಕನಕದಾಸರು ಜಾತಿ ತಾರತಮ್ಯವನ್ನು ಹೋಗಲಾಡಿಸಿದವರು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಪಿ.ಬೋಸಮ್ಮ ಮಂಜುನಾಥ್, ಸದಸ್ಯರಾದ ಪಾಪಮ್ಮ, ಟಿ ಮಹೇಶ್ವರಿ, ಗುರುಶಾಂತಮ್ಮ, ಮುಖ್ಯ ಅಧಿಕಾರಿ ಓ.ಶ್ರೀನಿವಾಸ್, ಸಿಬ್ಬಂದಿಗಳಾದ ದ್ವಿತೀಯ ದರ್ಜೆ ಸಹಾಯಕ ಟಿ. ತಿಪ್ಪೇಸ್ವಾಮಿ, ದಯಾನಂದ್, ಮಧು, ರತ್ನಮ್ಮ, ಲತಾ, ರೇಣುಕಮ್ಮ, ಶ್ವೇತಾ, ಆಶಾ, ಸೇರಿದಂತೆ ಪೌರಕಾರ್ಮಿಕರು ಇದ್ದರು.

