ಚಿತ್ರದುರ್ಗ: ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ
ಮೇಲೆತ್ತಲು ಕಾರ್ಯಾಗಾರ
ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆ
23 ನೇ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ, ಫಲಿತಾಂಶವನ್ನು
ಸುಧಾರಿಸುವ ನಿಟ್ಟಿನಲ್ಲಿ ಜಿಪಂ ಸಭಾಂಗಣದಲ್ಲಿಂದು
ಶಿಕ್ಷಕರಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಸುರೇಶ್ ಅವರು,
ಮಕ್ಕಳಿಗೆ ಬೋಧನೆಯಲ್ಲಿ ಯಾವ ರೀತಿ ಬದಲಾವಣೆಗಳನ್ನು
ಮಾಡಿಕೊಳ್ಳಬೇಕು ಮತ್ತು ಪರಿಣಾಮಕಾರಿಯಾಗಿ ಮಕ್ಕಳಿಗೆ
ವಿಷಯಗಳನ್ನು ಮನದಟ್ಟು ಮಾಡಿಕೊಡುವುದು ಹೇಗೆ ಎಂಬುದರ
ಬಗ್ಗೆ ಮಾಹಿತಿ ನೀಡಿದರು.

About The Author

Namma Challakere Local News
error: Content is protected !!