ಹೊಸದುರ್ಗ: ಚಿತ್ರ ನಟಿ ಉಮಾಶ್ರೀ ಶಿವಕುಮಾರ ಶ್ರೀ
ಪ್ರಶಸ್ತಿಗೆ ಆಯ್ಕೆ
ಹೊಸದುರ್ಗದ ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವದಲ್ಲಿ
ರಂಗಕರ್ಮಿ, ಚಿತ್ರ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರಿಗೆ
ಈ ಸಾಲಿನ ಡಾ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ
ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಇದೇ 7 ರಂದು ಪ್ರದಾನ
ಮಾಡಲಾಗುವುದು ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ
ಶ್ರೀಗಳು ತಿಳಿಸಿದ್ದಾರೆ. ಹೊಸದುರ್ಗದಲ್ಲಿಂದು ಮಾತನಾಡಿದ
ಅವರು, ಈ ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ
ಪತ್ರವನ್ನು ಒಳಗೊಂಡಿದೆ ಎಂದರು.

