ಚಳ್ಳಕೆರೆ : ಸರಕಾರದ ಗೃಹಜ್ಯೋತಿ ಯೋಜನೆ ಬಡ ಜನರಿಗೆ ವರದಾನವಾಗಬೇಕಿದ್ದು, ಕೆಲ ಅಧಿಕಾರಿಗಳ ಎಡವಟ್ಟಿನಿಂದ ಮಾರಕವಾಗಿದೆ ಎಂದು ನೊಂದ ಮಹಿಳೆ ಅಳಲುತೋಡಿಕೊಂಡಿದ್ದಾರೆ.

ಹೌದು ಚಳ್ಳಕೆರೆ ತಾಲೂಕಿನ ಗಾಂಧಿನಗರದ ಮಾರಮ್ಮನ ಗುಡಿ ಹಿಂಬಾಗದ ರಸ್ತೆಯ ಸುಮಾರು ಮನೆಗಳಿಗೆ ಅಕ್ಟೋಬರ್ ತಿಂಗಳ ವಿದ್ಯುತ್ ಬಿಲ್ ನೋಡಿ ಮಹಿಳೆಯರು ಶಾಖ್ ಹಾಗಿದ್ದಾರೆ.

ಈಗೇ ಚಳ್ಳಕೆರೆ ನಗರದ ಹಲವಾರು ಮನೆಗಳಿಗೆ ಈದೇ ರೀತಿಯಲ್ಲಿ ಬಿಲ್ ಹೆಚ್ಚಳವಾಗಿದೆ ಇದರಿಂದ ಸರಕಾರದ ಗೃಹಜ್ಯೋತಿ ಯೋಜನೆ ಬಡವರಿಗೆ ಕೈಗೆಟುಕದಾಗಿದೆ, ಇದರಿಂದ ಸ್ಥಳೀಯ ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮಹಿಳೆಯರು ಶಾಪ ಹಾಕುತ್ತಾ ವಿದ್ಯುತ್ ಬಿಲ್ ಗೆ ಶಾಕ್ ಹಾಗಿದ್ದಾರೆ.

ಇನ್ನೂ ಬೆಸ್ಕಾಂ ಸಹಾಯಕ ಅಧಿಕಾರಿ ಶಿವಪ್ರಸಾದ್ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿ, ಕೆಲ ಮೀಟರ್ ರೀಡರ್ ಗಳ‌ ಎಡವಟ್ಟಿನಿಂದ ಹೆಚ್ಚಳವಾಗಿ ಬಿಲ್ ಬಂದಿದೆ, ಪ್ರಸ್ತುತ ಆಧುನಿಕ ತಂತ್ರಜ್ಞಾನದ ಟೂಬ್ ಮೀಟರ್ ಮೂಲಕ ಬಿಲ್ ತೆಗೆದಾಗ ಮಾತ್ರ ಮಾಲೀಕರ‌ ನಿಗಧಿತ ಬಿಲ್ ಗೊತ್ತಾಗಲಿದೆ ಇದರಿಂದ ಮಾಲೀಕರಿಗೆ ಹೆಚ್ಚು ಬಾಳೆ ಬಾಕಿ ಬಿಲ್ ಮೊತ್ತ ಹೆಚ್ಚಾಗಲಿದೆ ಆದ್ದರಿಂದ ಮೀಟರ್ ನೀಡುವ ಹೊರಗುತ್ತುಗೆ ನೌಕರನಿಗೆ ನೋಟಿಸ್ ನೀಡಿ ಸೂಕ್ತ ಕಾರಣ ಹೇಳಲಾಗುತ್ತದೆ.

About The Author

Namma Challakere Local News
error: Content is protected !!