ಚಳ್ಳಕೆರೆ: ಇಂದಿನ ಆಧುನಿಕ ಜಗತ್ತಿಗೆ ಅಂಬೇಡ್ಕರ್ ರವರ ಸಂವಿಧಾನ ದಾರಿದೀಪವಾಗಿದೆ, ಅದರಂತೆ ಸಾಮಾಜಿಕ ಸಮಾನತೆಗೆ ಶಿಕ್ಷಣ, ಸಂಘಟನೆ
ಮತ್ತು ಹೋರಾಟ ಅಗತ್ಯ ಎಂದು ಹಿರಿಯ ವಕೀಲ
ಬಿ.ಎಂ. ಹನುಮಂತಪ್ಪ ಹೇಳಿದರು.

ತಾಲೂಕಿನ ಹೊಸಹಳ್ಳಿಯಲ್ಲಿ ಇತ್ತೀಚೆಗೆ
ಆಯೋಜಿಸಿದ್ದ ಅಂಬೇಡ್ಕರ್ ಯುವಕ ಸಂಘದ
ನಾಮಫಲಕ ಅನಾವರಣ ಸಮಾರಂಭದಲ್ಲಿ
ಮಾತನಾಡಿದರು.

ಸಂವಿಧಾನದ ಆಶಯದಂತೆ
ಆಶಯದಂತೆ, ಸರ್ಕಾರಗಳು
ಆಡಳಿತ ನಡೆಸಬೇಕು. ತಳ ಸಮುದಾಯಗಳು
ಮುಖ್ಯವಾಹಿನಿಗೆ ಬರುವತ್ತ ಚಿಂತನೆ ನಡೆಸಬೇಕು.
ದೇಶದ ಸಂಪತ್ತು ಸಮಾನವಾಗಿ ಹಂಚಿಕೆ ಆಗಬೇಕು.
ಮೀಸಲಾತಿ ವ್ಯವಸ್ಥೆ
ಜಾರಿಯಾಗಬೇಕು ಎಂದರು.

ಪರಿಣಾಮಕಾರಿಯಾಗಿ
ಮಾದಿಗ ಸಮುದಾಯದ ಶೈಕ್ಷಣಿಕ, ಸಾಮಾಜಿಕ
ಸುಧಾರಣೆಗೆ ಒಳಮೀಸಲಾತಿ ಆಧಾರ ಆಗಬೇಕು.
ಆದರೆ, ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನು
ಅಗೌರವದಿಂದ ಕಾಣುವ ಘಟನೆಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್‌ ನ್ಯಾಯಾಧೀಶ ಬಿ.ಆರ್.
ಗವಾಯಿ ಅವರ ಮೇಲೆ ಶೂ ಎಸೆದ ವಕೀಲನ ವಿರುದ್ಧ, ಶಿಸ್ತು ಕ್ರಮ ಕೈಗೊಳ್ಳಬೇಕು. ಪ್ರತಿ ನ್ಯಾಯಾಲಯದ
ಒಳಗೆ ಬರಿಗಾಲಲ್ಲಿ ಪ್ರವೇಶಿಸುವಂತೆ ಕಾನೂನು
ಜಾರಿ ಆಗಬೇಕಿದೆ, ಗ್ರಾಮಾಂತರ ಭಾಗದಲ್ಲಿ
ಈಗಲೂ ಪರಿಶಿಷ್ಟರ ಮೇಲೆ ನಡೆಯುತ್ತಿರುವ ಹಲ್ಲೆ,
ದೌರ್ಜನ್ಯ ಪ್ರಕರಣಗಳ ಕಡಿವಾಣಕ್ಕೆ ಸಂಘಟನೆ
ಬಲಗೊಳ್ಳಬೇಕಿದೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ
ಗ್ಯಾರಂಟಿ ಸಮಿತಿ ಸದಸ್ಯ ಆರ್. ಬಸಣ್ಣ, ಗ್ರಾಪಂ ಸದಸ್ಯ ಎಸ್‌. ರಾಜಣ್ಣ,
ಮಾಜಿ ಸದಸ್ಯ ರಾಮಣ್ಣ, ಕಲಾವಿದ ಚಂದ್ರಣ್ಣ, ಗ್ರಾಮ ಶಾಖೆ ಅಧ್ಯಕ್ಷ ಟಿ.ಮಲ್ಲೇಶಿ, ಉಪಾಧ್ಯಕ್ಷ ಎಚ್‌.ಕೆ. ತಿಮ್ಮಣ್ಣ, ಗೌರವಾಧ್ಯಕ್ಷ ಎಚ್‌. ತಿಪ್ಪೇಸ್ವಾಮಿ,
ಕಾರ್ಯದರ್ಶಿ ಪಿ. ಮಾರಣ್ಣ, ಟಿ. ಮಂಜಣ್ಣ, ವೈ. ಮೈಲಾರಪ್ಪ ಇತರರಿದ್ದರು.

About The Author

Namma Challakere Local News
error: Content is protected !!