ಚಳ್ಳಕೆರೆ :

ಚಳ್ಳಕೆರೆಯಲ್ಲಿ ಸೋಮುವಾರ ಸಂಜೆ ವೀರಭದ್ರಸ್ವಾಮಿ ಜಾತ್ರೆಯ ಮುಕ್ತಿ ಬಾವುಟ 15.55 ಲಕ್ಷ ಕ್ಕೆ ಹರಾಜಾಗಿದೆ. ಜಿಲ್ಲಾ ಸಚಿವ ಡಿ ಸುಧಾಕರ್ 15.55 ಲಕ್ಷ ಕ್ಕೆ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು

ವೀರಭದ್ರಸ್ವಾಮಿ ಜಾತ್ರೆಯಲ್ಲಿ ರಥೋತ್ಸವಕ್ಕೂ ಮುನ್ನ ಬಾವುಟವನ್ನು ಹರಾಜು ಹಾಕುವ ಸಂಪ್ರದಾಯವಿದೆ.

ಚಳ್ಳಕೆರೆ ನಗರದ ಆರಾಧ್ಯದೈವ ಶ್ರೀವೀರಭದ್ರಸ್ವಾಮಿ ರಥೋತ್ಸವ ಶ್ರದ್ಧಾಭಕ್ತಿಯಿಂದ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ನಡೆಯಿತು.

ವೀರಭದ್ರಸ್ವಾಮಿಗೆ ಬೃಹತ್‌ ಹೂವಿನ ಹಾರ, ಬಣ್ಣಗಳ ಬಾವುಟಗಳಿಂದ ಅಲಂಕರಿಸಲ್ಪಟ್ಟ ರಥದಲ್ಲಿ ಸ್ವಾಮಿ ಆಸೀನಗೊಳಿಸಿ ಪೂಜೆ ಸಲ್ಲಿಸಿದ ನಂತರ ಜಯ ಘೋಷಣೆಗಳೊಂದಿಗೆ ಅಪಾರ ಸಂಖ್ಯೆಯ ಭಕ್ತಸಮೂಹ ಸಮ್ಮುಖದಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ರಥದ ಬೀದಿಯಲ್ಲಿ ಗಾಂಭೀರ್ಯದಿಂದ ಹೊರಟ ತೇರಿನ ಮುಂಭಾಗ ಮಂಗಳ ವಾದ್ಯಗಳು ಕರಡಿ ಮಜಲು, ನಂದಿಕೋಲು, ಕೋಲಾಟ ಮತ್ತಿತರೆ ಜಾನಪದ ಕಲಾತಂಡಗಳು ಸಾಥ್‌ ನೀಡಿದವು. ಭಕ್ತ ಸಮೂಹ ಸ್ವಾಮಿಗೆ ಜಯಕಾರ ಹಾಕುತ್ತಾ ಸೂರುಬೆಲ್ಲ ಮೆಣಸು, ಬಾಳೆಹಣ್ಣುಗಳನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆ ಅರ್ಪಿಸಿ ಪುನೀತ ಭಾವದೊಂದಿಗೆ ತಮ್ಮ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಜಿಲ್ಲಾ ಉಸ್ತುವರಿ ಸಚಿವ ಡಿ.ಸುಧಾಕರ್ ಶಾಸಕರಾದ ಟಿ.ರಘುಮೂರ್ತಿ, ನಗರಸಭೆ ಅಧ್ಯಕ್ಷ ಮಂಜುಳ ಪ್ರಸನ್ನಕುಮಾರ್., ಉಪಾಧ್ಯಕ್ಷ ಕವಿತ ಬೊರಯ್ಯ. ಸೇರಿದಂತೆ ದೇವಸ್ಥಾನದ ಗೌಡರು ಪೂಜಾರಿಗಳು ಹಾಗೂ ಪುರಂತಪ್ಪ ಸೇರಿದಂತೆ ಅಪಾರ ಬಂಧು ಬಳಗ ಈ ಜಾತ್ರೆಯಲ್ಲಿ ಭಾಗಿಯಾದರು..

About The Author

Namma Challakere Local News
error: Content is protected !!