ಚಳ್ಳಕೆರೆ :
ಪೋಲೀಸ್ ಠಾಣೆ ಸುತ್ತಮುತ್ತಲಿನ ಪ್ರದೇಶ ಹಸಿರು ವಾತವರಣದಿಂದ ಕೂಡಿದ್ದರೆ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ನಮಗೆಲ್ಲ ಒಂದು ಉತ್ತಮವಾದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಚಳ್ಳಕೆರೆ ಡಿ ವೈ ಎಸ್ ಪಿ, ಟಿ ಬಿ ರಾಜಣ್ಣ ಹೇಳಿದರು.
ನಗರದಲ್ಲಿ
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ನಗರ ಠಾಣೆಯ ಮುಂಭಾಗದಲ್ಲಿ ಗಿಡ ನೆಟ್ಟು ನೀರು ಹಾಕಿ ನಂತರ ಅವರು ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ದಿನ ಗಿಡಗಳನ್ನು ಹಾಕಿದರೆ ಸಾಲದು ಹಾಕಿದಂತಹ ಗಿಡಗಳನ್ನು ಜವಾಬ್ದಾರಿ ಹೊತ್ತು ಬೆಳೆಸುವ ಕಾರ್ಯ ಮಾಡಬೇಕು. ಈಗಾಗಲೇ ಗಿಡಮರಗಳಿಲ್ಲದೆ ಪ್ರಾಣಿಗಳು ಪಕ್ಷಿಗಳ ಸಂಕಲ ನಶಿಸಿ ಹೋಗುತ್ತಿದೆ. ಠಾಣೆಯ ಸುತ್ತಮುತ್ತ ಗಿಡಮರಗಳನ್ನು ಬೆಳೆಸಿದರೆ ಪಕ್ಷಿಗಳು ಬಂದು ಕುಳಿತುಕೊಂಡು ಆಶ್ರಯ ಪಡುತ್ತವೆ ಜೊತೆಗೆ ಹಕ್ಕಿ ಪಕ್ಷಿಗಳ ಕಲರವ ನಮಗೆ ಇಂಪು ನೀಡುವುದರ ಜೊತೆಗೆ ಕೆಲಸದ ಒತ್ತಡದಲ್ಲಿರುವ ನಮಗೆಲ್ಲ ಪಕ್ಷಿಗಳ ಕಲರವ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡುತ್ತದೆ ಎಂದರು…
ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೆ. ಕುಮಾರ್ ಮಾತನಾಡಿ, ಈಗಾಗಲೇ ಪೊಲೀಸ್ ಠಾಣೆಯ ಆವರಣವನ್ನು ಸ್ವಚ್ಛಗೊಳಿಸಿದ್ದು ಪೋಲೀಸ್ ಠಾಣೆಯ ಮುಂಭಾಗದಲ್ಲಿ ಹಲವಾರು ಗಿಡಗಳನ್ನು ಹಾಕಲಾಗಿದೆ ಪ್ರತಿಯೊಂದು ಗಿಡಕ್ಕೆ ಒಬ್ಬೊಬ್ಬರ ಜವಾಬ್ದಾರಿ ನೀಡಲಾಗಿದ್ದು ಜವಾಬ್ದಾರಿ ಹೊತ್ತು ಈ ಗಿಡಗಳನ್ನು ಬೆಳೆಸುವಂತಹ ಕಾರ್ಯವಾಗಬೇಕು ಗಿಡ ಮರಗಳು ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದರೆ ಇಲ್ಲಿನ ವಾತಾವರಣವೇ ಒಂದು ಸುಂದರವಾಗಿರುತ್ತೆ ಎಂದರು …
ಈ ಸಂದರ್ಭದಲ್ಲಿ ಪಿಎಸ್ಐ ಧರಪ್ಪ ಬಾಳಪ್ಪ ದೊಡ್ಮನಿ. ಎಎಸ್ ಐ ದೊಡ್ಡತಿಪ್ಪಯ್ಯ ರವಿ ಪೋಲಿಸ್ ಪೇದೆಗಳಾದ ವಸಂತ್ ಕುಮಾರ್, ಶಂಕ್ರು,ಮಂಜುನಾಥ, ಲಕ್ಷ್ಮಿ,ಚೈತ್ರ,ಶಿವರಾಜ್,ಮಧು ಮಂಜಣ್ಣ,ಶಿವನಂದ ಮಡಿವಾಳ,ಇತರರು ಇದ್ದರು.

