ಚಳ್ಳಕೆರೆ :

ಚಿತ್ರದುರ್ಗ: ಪ್ರತಿಭಟನಾಕಾರನಿಗೆ ಪಿಎಸೈನಿಂದ ಕಪಾಳ
ಮೋಕ್ಷ
ಒಳ ಮೀಸಲಾತಿ ಜಾರಿಗೆ ಸ್ವಾಭಿಮಾನಿ ಮಾದಿಗ ಮಹಾ
ಸಭಾ ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. ಈ
ಪ್ರತಿಭಟನೆಯಲ್ಲಿ ಏಕಾ ಏಕಿ ನುಗ್ಗಿ ಬಂದ ಹೋರಾಟಗಾರರು
ಡಿಸಿ ಕಚೇರಿನುಗ್ಗಲು ಯತ್ನಿಸಿದರು. ಈ ಸಮಯದಲ್ಲಿ ಪಿಎಸೈ
ಒಬ್ಬರು ಪ್ರತಿಭಟನಾಕಾರನಿಗೆ ಕಪಾಳ ಮೋಕ್ಷ ಮಾಡಿದ
ಘಟನೆಯು ನಡೆಯಿತು. ಪೊಲೀಸರು ಅವರನ್ನು ಬಾಗಿಲಲ್ಲೆ ತಡೆದು
ನಿಯಂತ್ರಿಸಿದರು. ಡಿಸಿ ಕಚೇರಿ ಬಾಗಿಲಲ್ಲಿ ತಡೆದ ಪೊಲೀಸರು
ಪ್ರತಿಭಟನಾಕಾರರನ್ನು ಕೆಳಗೆ ಕರೆ ತಂದು ಬಿಟ್ಟರು.

ಚಿತ್ರದುರ್ಗ: ಪೊಲೀಸರಿಗೆ ಎಚ್ಚರಿಕೆ ನೀಡಿದ ಮಾದಿಗ
ಮುಖಂಡ
ಚಿತ್ರದುರ್ಗದಲ್ಲಿ ಶುಕ್ರವಾರ ನಡೆದ ಒಳ ಮೀಸಲಾತಿ
ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿ, ಕಚೇರಿಯೊಳಗೆ ನುಗ್ಗಲೆತ್ನಿಸಿದ
ಮೋಹನ್ ಮತ್ತು ಇತರರನ್ನು ಎಳೆದುತಂದ ಪೊಲೀಸರಿಗೆ,
ಮೋಹನ್ ಮಾದಿಗರ ಮೇಲೆ ಯಾವ ಪೊಲೀಸ್ ಆದರೂ
ಕೈಯಿಟ್ಟರೆ ಸರಿ ಇರಲ್ಲ ಎಂದು ಮಾದಿಗ ಮುಖಂಡ ಮೋಹನ್
ಎಚ್ಚರಿಕೆ ನೀಡಿದ ಘಟನೆ ನಡೆಯಿತು. ನಾವು ಸಾಮಾಜಿಕ ನ್ಯಾಯ
ಕೇಳಲು ಬಂದಿದ್ದೇವೆ. ನಾವು ಎರಡು ದಿನಗಳಿಂದ ಮಾಹಿತಿ
ನೀಡಿದ್ದೇವೆ, ಆದರೆ ಪೊಲೀಸರು ಪ್ರತಿಭಟನೆ ಹತ್ತಿಕ್ಕುತ್ತಿರಾ
ಎಂದರು.

About The Author

Namma Challakere Local News
error: Content is protected !!