ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು
ಅವರು ಬೆಂಗಳೂರಿನ ಫ್ರೀಡಂ ಪಾರ್ಕಲ್ಲಿ ಆಯೋಜನೆಗೊಂಡಿದ್ದಂತಹ ಒಳ ಮೀಸಲಾತಿಯ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿ ಪರಿಶಿಷ್ಟರು ಹೋರಾಟದ ಮೂಲಕ ಸಂವಿಧಾನದ ಸವಲತ್ತನ್ನು ಪಡೆಯು ಬೇಕಾಗಿ ಬಂದಂತಹ ಪರಿಸ್ಥಿತಿ ನಿಜಕ್ಕೂ ಕೂಡ ದೌರ್ಭಾಗ್ಯ ಸಂವಿಧಾನದ ಆಶಯಗಳಲ್ಲಿ ಕೆಲಸ ಮಾಡುವಂತಹ ಶಾಸಕಾಂಗ ಮತ್ತು ಕಾರ್ಯಾಂಗ ಮುಷ್ಕರ ಮತ್ತು ಚಳುವಳಿಗಳಿಲ್ಲದೆ ಯಾವುದೇ ಸೌಲಭ್ಯಗಳನ್ನು ಕೂಡ ಶೋಷಿತರಿಗೆ ನೀಡುತ್ತಿಲ್ಲ
2022 ರಲ್ಲಿನ ಆಗಿನ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ ತಲಾ ಎರಡು ಮತ್ತು ನಾಲ್ಕು ರಷ್ಟು ಮೀಸಲಾತಿಯನ್ನು ಹೆಚ್ಚಳ ಮಾಡಿ ಈ ಅಂಶಗಳನ್ನಾಧರಿಸಿ ಈಗಿನ ಸರ್ಕಾರವೂ ಕೂಡ ಇದರಲ್ಲಿ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಲು ಮುಂದಾಗಿತ್ತು ಇದಕ್ಕೆ ರಾಜ್ಯಪಾಲರ ಅಂಕಿತವು ಕೂಡ ದೊರಕಿತ್ತು
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಪೀಠದಲ್ಲಿ ಮಹೇಂದ್ರ ಕುಮಾರ್ ಎನ್ನುವವರು ಕರ್ನಾಟಕ ಸರ್ವೋಚ್ಚ ನ್ಯಾಯಾಲಯದ ಇಂದ್ರ ಸಾನಿ ಪ್ರಕರಣವನ್ನು ಉಲ್ಲೇಖಿಸಿ ರಿಟರ್ಜಿ ಸಲ್ಲಿಸಿದ್ದು ಈ ಅರ್ಜಿಯನ್ನು ಪರಿಶೀಲಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ ಸದರಿ ಇಂದ್ರ ಸಾನಿ ಪ್ರಕರಣವನ್ನು ಉಲ್ಲೇಖಿಸಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಒಳ ಮೀಸಲಾತಿಯ ಎಲ್ಲಾ ಆಕಾರಗಳನ್ನು ಪೂರ್ಣಗೊಳಿಸಿಕೊಳ್ಳಲು ಮತ್ತು ಇದಕ್ಕೆ ಸಂಬಂಧಿಸಿದಂತೆ ಮುಂಬರುವ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ
ಮತ್ತೊಂದು ಪ್ರಕರಣದಲ್ಲಿ ಅಲೆಮಾರಿ ಜನಾಂಗದವರು ಹಿಂದುಳಿದ ಮತ್ತು ಅತಿ ಹಿಂದುಳಿದವರಲ್ಲಿ ಮೀಸಲಾತಿಯ ಕುರಿತಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಇದರಲ್ಲೂ ಕೂಡ ಇದೇ ಅಂಶಗಳನ್ನಾಧರಿಸಿ ನ್ಯಾಯಾಲಯವು ನಿರ್ದೇಶನ ನೀಡಲಾಗಿದೆ ಮೊನ್ನೆ ನಡೆದ ಸಚಿವ ಸಂಪುಟ ಸಭೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಅಡಿಷನಲ್ ಅಡ್ವಕೇಟ್ ಜನರಲ್ ರವರು ಅಭಿಪ್ರಾಯಸಿರುವ ಅಂಶ ಅಂದರೆ ಪರಿಶಿಷ್ಟ ಜಾತಿಯ ನಾಲ್ಕು ಮತ್ತು ಪರಿಶಿಷ್ಟ ಪಂಗಡದ ಎರಡು ಶೇಕಡ ಈ 6 ರಷ್ಟು ಹುದ್ದೆಗಳನ್ನು ಮೀಸಲಿಟ್ಟು ಉಳಿದ 94ರಷ್ಟು ಶೇಕಡ ಈ 6 ರಷ್ಟು ಹುದ್ದೆಗಳು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಬರುವಂತಹ ಆದೇಶದಂತೆ ಹುದ್ದೆಗಳನ್ನು ತುಂಬಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ
ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಹೊರಡಿಸಿರುವ ಆದೇಶದಲ್ಲಿ ಈ ಅಂಶಗಳ ಸ್ಪಷ್ಟತೆ ಇಲ್ಲದಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆತಂಕಕ್ಕೆ ಕಾರಣವಾಗಿದೆ
ಮಾನ್ಯ ಮುಖ್ಯಮಂತ್ರಿಗಳ ಮತ್ತು ಸಮಾಜ ಕಲ್ಯಾಣ ಕ ಸಚಿವರು ಈ ಬಗ್ಗೆ ತಕ್ಷಣ ಮಧ್ಯ ಪ್ರವೇಶಿಸಿ ಕ್ರಮ ಕೈಗೊಂಡು ರಾಜ್ಯದ ಪರಿಶಿಷ್ಟ ರ ಹಿತ ಕಾಯಬೇಕೆಂದು ಆಗ್ರಹಿಸಿದರು

