ಚಳ್ಳಕೆರೆ :
ಗ್ರಾಮದಲ್ಲಿ ಪ್ರತಿ ಬಾರಿಯೂ ಜನರು ಪಡಿತರ
ಪಡೆದುಕೊಳ್ಳಲು ನ್ಯಾಯಬೆಲೆ ಅಂಗಡಿಯ ಮುಂದೆ
ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ
ಎಂಬ ದೂರುಗಳು ಬರುತ್ತಿದ್ದ ಪಡಿತರ ವಿತರಣೆಯಲ್ಲಿ
ಲೋಪ ಕಂಡು ಬಂದರೆ ಕ್ರಮಕೈಗೊಳ್ಳುವುದಾಗಿ ತಾಪಂ
ಇಒ ಶಶಿಧರ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ
ತಾಲೂಕು ಗ್ಯಾರೆಂಟಿ ಅನುಷ್ಠಾನಸಮಿತಿಅಧ್ಯಕ್ಷ ಗದ್ದಿಗೆ
ತಿಪ್ಪೇಸ್ವಾಮಿ ಅಧ್ಯಕ್ಷತೆತಲ್ಲಿ ನ್ಯಾಯಬೆಲೆ ಅಂಗಡಿ
ಮಾಲಿಕರಿಗೆ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ
ಭಾಗವಹಿಸಿ ಮಾತನಾಡಿದರು.
ಕೆಲವೇ ನ್ಯಾಯಬೆಲೆ ಅಂಗಡಿ ಮಾಲಿಕರಿಂದ ಇಡೀ
ತಾಲೂಕಿನ ಮರ್ಯಾದೆ ಹೋಗುತ್ತಿದ್ದು ಪಡಿತರ ವಿತರಣೆ
ನಿಯಮ ಪಾಲಿಸಿ ವಿತರಣೆ ಮಾಡ ಬೇಕು. ಪಡಿತರ
ವಿತರಣೆ ದಿನಾಂಕ. ಫಲಾನುಭವಿಗೆ ವಿತರಣೆ ಮಾಡುವ
ಪಡಿತರ ಬಗ್ಗೆ ನಾಮಫಲಕದಲ್ಲಿ ಕಾಣುವಂತೆ
ಕಡ್ಡಾಯವಾಗಿ ಹಾಕ ಬೇಕು ಎಂದರು.
ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿ ಬಯೋಮೆಟ್ರಿಕ್
ಪಡೆದರೂ ಸಹ ಎರಡು ಮೂರು ತಿಂಗಳ ಅಕ್ಕಿ ವಿತರಣೆ
ಮಾಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು ಅಕ್ಕಿ
ಸಿಗುವುದಿಲ್ಲ ಎಂಬ ಗೊಂದಲದಲ್ಲಿ ಕೂಲಿ ನಾಲಿ ಬಿಟ್ಟು
ಬಯೋಮೆಟ್ರಿಕ್ ಪಡೆಯಲು ಒಂದು ದಿನ ಮತ್ತೊಂದು
ಅಕ್ಕಿ ಪಡೆಯಲು ಎರಡು ದಿನಗಟ್ಟಲೆ ನೂಕು ನುಗ್ಗಲಿನಲ್ಲಿ
ನಿಲ್ಲುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತಿವೆ ಮತ್ತೆ
ಇಂತಹ ದೂರುಗಳ ಬರಂತೆ ಪಡಿತರ ವಿತರಣೆ
ಮಾಡಬೇಕು ಎಂದರು.
ತಾಪಂ ಇಒ ಶಶಿಧರ್ ಮಾತನಾಡಿ ಬಯೋಮೆಟ್ರಿಕ್
ಪಡೆದ ದಿನವೇ ಅಕ್ಕಿ ಕೊಡಿ ಎರಡು ದಿನ ಕಾಯಿಸ ಬೇಡಿ
ಎಂದು ಹೇಳಿದರು.

