ಚಳ್ಳಕೆರೆ :
ಚಿತ್ರದುರ್ಗ: ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆ
ಆರಂಭ
ಬಿಜೆಪಿಯಿಂದ ಜನಾಕ್ರೋಶ ಯಾತ್ರೆಯನ್ನು ಆರಂಭಿಸಲಾಗಿದೆ.
ಇದನ್ನು ತಾಲೂಕು, ಗ್ರಾಮಗಳ ಮಟ್ಟಕ್ಕೆ ತೆಗೆದುಕೊಂಡು
ಹೋಗುತ್ತೇವೆಂದು ವಿಧಾನಪರಿಷತ್ ಸದಸ್ಯ ಕೆಎಸ್ ನವೀನ್
ಹೇಳಿದರು.
ಚಿತ್ರದುರ್ಗದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿ, ಡಿಸಿಎಂ ಡಿಕೆ ಶಿವಕುಮಾರ್ ಅವರು ಅಲ್ಪ
ಸಂಖ್ಯಾತರ ಮೀಸಲಾತಿ ಉಳಿಸಿಕೊಳ್ಳಲು ಸಂವಿಧಾನ ತಿದ್ದುಪಡಿ
ಮಾಡುತ್ತೇವೆಂದು ಹೇಳಿದ್ದಾರೆ. ಇದು ಸಂಪೂರ್ಣ ಸಂವಿಧಾನ
ವಿರೋಧಿ ಹೇಳಿಕೆಯಾಗಿದೆ. ಅದೆಷ್ಟೆ ದೊಡ್ಡ ವ್ಯಕ್ತಿಯಾದರೂ
ಅದನ್ನು ಖಂಡಿಸುತ್ತೇವೆಂದರು.

