ಚಿತ್ರದುರ್ಗ: ಕೋಟೆ ನಾಡಿನಲ್ಲಿ ಜರುಗಿದ ಅದ್ದೂರಿ
ಪಾರ್ಶ್ವನಾಥ ಜಯಂತಿ
ಚಿತ್ರದುರ್ಗದಲ್ಲಿ ಇಂದು ಪಾರ್ಶ್ವನಾಥ ಜಯಂತಿಯನ್ನು
ಅದ್ದೂರಿಯಾಗಿ ಆಚರಿಸಲಾಯಿತು. ಜೈನ ಸಮುದಾಯದವರು
ನಗರದ ಗಾಂಧಿ ವೃತ್ತದಿಂದ ಮೆರವಣಿಗೆಯನ್ನು ಪ್ರಾರಂಭಿಸಿ,
ಪ್ರಮುಖ ಬೀದಿಗಳ ಮೂಲಕ ಪಾರ್ಶ್ವನಾಥ ದೇವಾಲಯ
ತಲುಪಿದರು. ಪಾರ್ಶ್ವನಾಥರ ಭಾವಚಿತ್ರವನ್ನು ಸಾರೋಟಿನಲ್ಲಿಟ್ಟು,
ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದ
ಪ್ರಯೋಜಕರನ್ನೂ ಸಾರೋಟಿನಲ್ಲಿ ಕರೆದೊಯ್ಯಲಾಯಿತು.

