ನಗರದ ಪಾವಗಡ ರಸ್ತೆಯ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಕೂಡಿ ಬಂದ ಭಾಗ್ಯ ಅಧಿಕಾರಿಗಳಿಂದ ಅಳತೆ ಕಾರ್ಯ ಆರಂಭ 

ಚಳ್ಳಕೆರೆ: ನಗರದ ಪಾವಗಡ ರಸ್ತೆಯ ರೈಲ್ವೆ ಹಳಿಗೆ ಮೇಲು ಸೇತುವೆ ನಿರ್ಮಿಸುವಂತೆ ಸುಮಾರು ವರ್ಷಗಳಿಂದ ರೈತ ಹಾಗೂ ವಿವಿಧ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಭಾಗದಲ್ಲಿ ರೈಲ್ವೆ ಹಳಿಗೆ ಮೇಲು ಸೇತುವೆ ನಿರ್ಮಿಸದ ಕಾರಣ ದಿನನಿತ್ಯ ನೂರಾರು ವಾಹನಗಳು ಸಂಚರಿಸುವಾಗ ರೈಲು ಸಂಚರಿಸುವ ವೇಳೆ ಗೇಟ್ ಹಾಕುತ್ತಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು ಈ ಸಮಸ್ಯೆಯನ್ನು ಬಗೆಹರಿಸುವಂತೆ ಈ ಹಿಂದೆ ಹಲವು ಪ್ರತಿಭಟನೆಗಳೇ ನಡೆದಿದ್ದವು ಈ ಸಂಬಂಧ ಗುರುವಾರ ರೈಲ್ವೆ ಇಲಾಖೆ ನಗರಸಭೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಅಳತೆ ಕಾರ್ಯ ಕೈಗೊಂಡು ನಾಲ್ಕು ಲೈನ್ ಗಳ ಮೇಲು ಸೇತುವೆ ನಿರ್ಮಾಣ ಮಾಡಲು ಅಳತೆ ಕಾರ್ಯ ಆರಂಭಿಸಿತು. ಈ ವೇಳೆ ಮಾತಾಡಿದ ತಹಶೀಲ್ದಾರ್ ರೆಹಾನ್ ಪಾಷಾ ಪಾವಗಡ ರಸ್ತೆಯಲ್ಲಿ ದಿನನಿತ್ಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಸಂಚಾರ ನಡೆಸಲು ತೊಂದರೆ ಉಂಟಾಗುತ್ತಿತ್ತು ಈ ಬಗ್ಗೆ ನಗರಸಭೆ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದು ಶೀಘ್ರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದ್ದು ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ತಹಶಿಲ್ದಾರ್ ರೆಹಾನ್ ಪಾಶ ನಗರಸಭೆ ಅಧ್ಯಕ್ಷೆ ಶಿಲ್ಪ ಉಪಾಧ್ಯಕ್ಷೆ ಕವಿತಾ ನಗರ ಸಭೆ ಇಂಜಿನಿಯರ್ ವಿನಯ್ ಕಂದಾಯ ಅಧಿಕಾರಿ ಪ್ರಕಾಶ್ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!