ಅವರು ನಗರದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ತಾಲೂಕು ಪಂಚಾಯಿತಿ ಇಓ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು
ಕರ್ನಾಟಕ ರಾಜ್ಯ ನರೇಗಾ ನೌಕರರ
ಕ್ಷೇಮಾಭಿವೃದ್ಧಿ ಸಂಘದ ಸಭೆಯ ನಡಾವಳಿ ಪ್ರಕಾರ ಹಾಗೂ ಕರ್ನಾಟಕ ಬೇರ್ ಫೂಟ್
ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದ ಸಭೆಯ ನಡಾವಳಿ ಮೂಲಕ
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ
ಯೋಜನೆಯಡಿ ನಾವು ಜಿಲ್ಲಾ ಪಂಚಾಯತ್‌ ಮತ್ತು ತಾಲೂಕ ಪಂಚಾಯತ್‌ ಮಟ್ಟದಲ್ಲಿ ಕಳೆದ
ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ, ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ
ಭಾಗಿಯಾಗಿದ್ದೇವೆ.

ಕರ್ನಾಟಕ ರಾಜ್ಯದಾದ್ಯಂತ ಸುಮಾರು 7250 ಕ್ಕೂ ಹೆಚ್ಚು ನೌಕರರು ನರೇಗಾ
ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ.
ಜಿಲ್ಲಾ ಪಂಚಾಯತ್ ಹಂತದಲ್ಲಿ ಎ.ಡಿ.ಪಿ.ಸಿ, ಡಿ.ಎಂ.ಐ.ಎಸ್, ಡಿ.ಐ.ಇ.ಸಿ, ಜಿಲ್ಲಾ ಅಕೌಂಟ್
ಮ್ಯಾನೇಜರ್, ಅದೇ ರೀತಿ ತಾಲೂಕು ಪಂಚಾಯತ್‌ ಹಂತದಲ್ಲಿ ತಾಂತ್ರಿಕ ಸಂಯೋಜಕರು,

ಎಂ.ಐ.ಎಸ್‌. ಸಂಯೋಜಕರು, ಐ.ಇ.ಸಿ. ಸಂಯೋಜಕರು, ತಾಂತ್ರಿಕ ಸಹಾಯಕರುಗಳು,
ತಾಲೂಕು ಆಡಳಿತ ಸಹಾಯಕರು, ಬಿ ಎಫ್ ಟಿ ಗಳು ಮತ್ತು ಗ್ರಾಮ ಕಾಯಕ ಮಿತ್ರರು ಹಾಗೂ
ಡಿ.ಇ.ಓಗಳು ಅದರಂತೆ ಅನುಷ್ಠಾನ ಇಲಾಖೆಯಡಿ ಡಿ.ಇ.ಓ.ಕಂ.ಕೋಆರ್ಡಿನೇಟರ್
ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಕಳೆದ ಜನವರಿ-2025 ರ ಮಾಹೆಯಿಂದ
ಇಲ್ಲಿಯವರೆಗೂ ವೇತನ ಪಾವತಿಯಾಗಿರುವುದಿಲ್ಲ, ಇದರಿಂದ ಎಲ್ಲಾ ನೌಕರರು ತೀವು ಆರ್ಥಿಕ
ಸಂಕಷ್ಟಕ್ಕೆ ಸಿಲುಕಿರುತ್ತಾರೆ.

ಕಳೆದ 06 ತಿಂಗಳುಗಳಿಂದ ವೇತನ ಪಾವತಿ ಆಗದೇ ಇರುವುದರಿಂದ
ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ
ವೆಚ್ಚಗಳು, ಪಯಾಣ ವೆಚ್ಚಗಳು, ಸಾಲಗಳ ಮರುವಾವತಿ ಸೇರಿದಂತೆ ಅನೇಕ ರೀತಿಯ
ಖರ್ಚುಗಳನ್ನು ನಿಭಾಯಿಸಲು ತೀವು ತೊಂದರೆಯುಂಟಾಗಿರುತ್ತದೆ.
ಸಕಾಲದಲ್ಲಿ ವೇತನ ಪಾವತಿಯಾಗದೇ ಇರುವುದರಿಂದ ಸ್ನೇಹಿತರಲ್ಲಿ,
ಸಂಬಂಧಿಕರಲ್ಲಿ ಸ್ವಾಭಿಮಾನ ಅಡವಿಟ್ಟು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಖಾಸಗಿ
ಲೇವಾದೇವಿದಾರರಿಂದ ಅನಿವಾರ್ಯವಾಗಿ ಸಾಲ ಮಾಡಿ ದಿನನಿತ್ಯದ ಆಗು-ಹೋಗುಗಳನ್ನು
ನೋಡಿಕೊಳ್ಳುತ್ತಾ ಕುಟುಂಬ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯು ನಮ್ಮ ನೌಕರ
ವರ್ಗದವರನ್ನು ತೀವ್ರ ಮುಜುಗರಕ್ಕೆ ತಳ್ಳುತ್ತಿದ್ದು ಪ್ರತಿಯೊಬ್ಬ ನರೇಗಾ ನೌಕರರು ಒಂದಲ್ಲಾ ಒಂದು
ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದ್ದಾರೆ ಒಂದು ವಾರದೊಳಗೆ ವೇತನ ಪಾವತಿಯಾಗದೇ
ಇದ್ದಲ್ಲಿ, ನೌಕರರ ಆರ್ಥಿಕ ಪರಿಸ್ಥಿತಿ, ಮನೋಬಲ, ಆತ್ಮಸ್ಥೆರ್ಯ ಮತ್ತಷ್ಟು ಕುಸಿಯಲಿದೆ.

ಬಾಕಿ ವೇತನ ಪಾವತಿ ವಿಚಾರವಾಗಿ ಮೇಲಾಧಿಕಾರಿಗಳು ಕೇಂದ್ರ ಸರ್ಕಾರದಿಂದ ಅನುದಾನ
ಬಂದಿಲ್ಲ ಎಂದು ಇಲ್ಲಿಯವರೆಗು ಮಾಹಿತಿ ನೀಡುತ್ತಿದ್ದರು. ಪುಸ್ತುತ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ
ಅನುದಾನ ಬಿಡುಗಡೆಗೊಂಡಿದ್ದು, ರಾಜ್ಯದಿಂದ ಜಿಲ್ಲಾ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಿದೆ
ಎಂಬ ಮಾಹಿತಿ ನೀಡಿರುತ್ತಾರೆ.
ಆದರೇ ಹೊಸ ತಂತ್ರಾಂಶದಲ್ಲಿ ವೇತನ ಪಾವತಿ ಮಾಡಲು ತಾಂತ್ರಿಕ ಸಮಸ್ಯೆ ಬಗೆಹರೆಯದೇ
ಇರುವುದರಿಂದ ವೇತನ ಪಾವತಿಯು ವಿಳಂಬವಾಗುತ್ತಿದೆ.

ಪ್ರಸ್ತುತ ತಾಲ್ಲೂಕಿನಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಗಳು
ನಡೆಯುತ್ತಿರುವುದರಿಂದ ಕಾಮಗಾರಿ ಸ್ಥಳಕ್ಕೆ ಹೋಗಿ ಕಾಮಗಾರಿಗಳನ್ನು ತೋರಿಸುವುದಕ್ಕೂ ಸಹ
ಸಾಧ್ಯವಾಗುತ್ತಿಲ್ಲ. ಮೇಲಿನ ಎಲ್ಲಾ ನರೇಗಾ ಸಿಬ್ಬಂದಿಗಳು ಕ್ಷೇತ್ರ ಮಟ್ಟದಲ್ಲಿ ಕಾರ್ಯ
ನಿರ್ವಹಿಸುತ್ತಿರುವುದರಿಂದ ಕ್ಷೇತ್ರ ಭೇಟಿಯ ಸಮಯದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆ ಮತ್ತು
ಅಪಘಾತದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಗಣಿಸಿ ತುರ್ತಾಗಿ ಎಲ್ಲಾ ಸಿಬ್ಬಂದಿಗಳಿಗೆ ಅಪಘಾತ
ವಿಮಾ ಸೌಲಭ್ಯ ಹಾಗೂ ಸಾಮೂಹಿಕ ಕುಟುಂಬ ಆರೋಗ್ಯ ವಿಮಾ ಸೌಲಭ್ಯಗಳನ್ನು ನೀಡಲು
ವಿನಂತಿಸುತ್ತಾ
ಈ ಮೇಲಿನ ಅಂಶಗಳೆಲ್ಲವನ್ನು ಪರಿಗಣಿಸಿ ಕೂಡಲೇ ನರೇಗಾ ನೌಕರರ ಬಾಕಿ ವೇತನ
ಪಾವತಿ ಹಾಗೂ ಸಾಮೂಹಿಕ ಆರೋಗ್ಯವಿಮೆ ಮತ್ತು ಅಪಘಾತ ವಿಮಾ ಸೌಲಭ್ಯಗಳನ್ನು
ನೀಡಲು ಅಗತ್ಯಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ಪ್ರವೀಣ್ ಕುಮಾರ್ ಮಹೇಂದ್ರ ಇಂಜಿನಿಯರ್ ದಿನೇಶ್ ,ಮಂಜುನಾಥ್ , ಬಿಎಪ್ ಟಿ ಗಳು ಇತರರು ಇದ್ದರು.

ಚಳ್ಳಕೆರೆ :
ತಾಲ್ಲೂಕಿನ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತ್ತು ಬಿ.ಎಫ್.ಟಿ ಹಾಗೂ ಜಿ.ಕೆ.ಎಂ. ಗಳಿಗೆ
ಕಳೆದ 6 ತಿಂಗಳುಗಳಿಂದ ವೇತನ ಪಾವತಿಯಾಗದೆ ವಿಳಂಬ ಆಗಿರುವ ಬಗ್ಗೆ ಮತ್ತು ಮೇಲಿನ ಎಲ್ಲಾ ನೌಕರರುಗಳಿಗೆ ಅಪಘಾತ ವಿಮೆ ಮತ್ತು ಸಾಮೂಹಿಕ
ಕುಟುಂಬ ಆರೋಗ್ಯ ವಿಮಾ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಶಿಪಾರಸ್ಸು ಮಾಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್ ಶಶಿಧರ್ ರವರಿಗೆ ತಾಲ್ಲೂಕು ತಾಂತ್ರಿಕ ಅಧಿಕಾರಿ ದಿನೇಶ್ ಹಾಗೂ ಬಿಎಪ್ ಟಿಗಳು ಮನವಿ ಸಲ್ಲಿಸಿದರು

ಅವರು ನಗರದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ತಾಲೂಕು ಪಂಚಾಯಿತಿ ಇಓ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು
ಕರ್ನಾಟಕ ರಾಜ್ಯ ನರೇಗಾ ನೌಕರರ
ಕ್ಷೇಮಾಭಿವೃದ್ಧಿ ಸಂಘದ ಸಭೆಯ ನಡಾವಳಿ ಪ್ರಕಾರ ಹಾಗೂ ಕರ್ನಾಟಕ ಬೇರ್ ಫೂಟ್
ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದ ಸಭೆಯ ನಡಾವಳಿ ಮೂಲಕ
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ
ಯೋಜನೆಯಡಿ ನಾವು ಜಿಲ್ಲಾ ಪಂಚಾಯತ್‌ ಮತ್ತು ತಾಲೂಕ ಪಂಚಾಯತ್‌ ಮಟ್ಟದಲ್ಲಿ ಕಳೆದ
ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ, ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ
ಭಾಗಿಯಾಗಿದ್ದೇವೆ.

ಕರ್ನಾಟಕ ರಾಜ್ಯದಾದ್ಯಂತ ಸುಮಾರು 7250 ಕ್ಕೂ ಹೆಚ್ಚು ನೌಕರರು ನರೇಗಾ
ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ.
ಜಿಲ್ಲಾ ಪಂಚಾಯತ್ ಹಂತದಲ್ಲಿ ಎ.ಡಿ.ಪಿ.ಸಿ, ಡಿ.ಎಂ.ಐ.ಎಸ್, ಡಿ.ಐ.ಇ.ಸಿ, ಜಿಲ್ಲಾ ಅಕೌಂಟ್
ಮ್ಯಾನೇಜರ್, ಅದೇ ರೀತಿ ತಾಲೂಕು ಪಂಚಾಯತ್‌ ಹಂತದಲ್ಲಿ ತಾಂತ್ರಿಕ ಸಂಯೋಜಕರು,

ಎಂ.ಐ.ಎಸ್‌. ಸಂಯೋಜಕರು, ಐ.ಇ.ಸಿ. ಸಂಯೋಜಕರು, ತಾಂತ್ರಿಕ ಸಹಾಯಕರುಗಳು,
ತಾಲೂಕು ಆಡಳಿತ ಸಹಾಯಕರು, ಬಿ ಎಫ್ ಟಿ ಗಳು ಮತ್ತು ಗ್ರಾಮ ಕಾಯಕ ಮಿತ್ರರು ಹಾಗೂ
ಡಿ.ಇ.ಓಗಳು ಅದರಂತೆ ಅನುಷ್ಠಾನ ಇಲಾಖೆಯಡಿ ಡಿ.ಇ.ಓ.ಕಂ.ಕೋಆರ್ಡಿನೇಟರ್
ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಕಳೆದ ಜನವರಿ-2025 ರ ಮಾಹೆಯಿಂದ
ಇಲ್ಲಿಯವರೆಗೂ ವೇತನ ಪಾವತಿಯಾಗಿರುವುದಿಲ್ಲ, ಇದರಿಂದ ಎಲ್ಲಾ ನೌಕರರು ತೀವು ಆರ್ಥಿಕ
ಸಂಕಷ್ಟಕ್ಕೆ ಸಿಲುಕಿರುತ್ತಾರೆ.

ಕಳೆದ 06 ತಿಂಗಳುಗಳಿಂದ ವೇತನ ಪಾವತಿ ಆಗದೇ ಇರುವುದರಿಂದ
ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ
ವೆಚ್ಚಗಳು, ಪಯಾಣ ವೆಚ್ಚಗಳು, ಸಾಲಗಳ ಮರುವಾವತಿ ಸೇರಿದಂತೆ ಅನೇಕ ರೀತಿಯ
ಖರ್ಚುಗಳನ್ನು ನಿಭಾಯಿಸಲು ತೀವು ತೊಂದರೆಯುಂಟಾಗಿರುತ್ತದೆ.
ಸಕಾಲದಲ್ಲಿ ವೇತನ ಪಾವತಿಯಾಗದೇ ಇರುವುದರಿಂದ ಸ್ನೇಹಿತರಲ್ಲಿ,
ಸಂಬಂಧಿಕರಲ್ಲಿ ಸ್ವಾಭಿಮಾನ ಅಡವಿಟ್ಟು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಖಾಸಗಿ
ಲೇವಾದೇವಿದಾರರಿಂದ ಅನಿವಾರ್ಯವಾಗಿ ಸಾಲ ಮಾಡಿ ದಿನನಿತ್ಯದ ಆಗು-ಹೋಗುಗಳನ್ನು
ನೋಡಿಕೊಳ್ಳುತ್ತಾ ಕುಟುಂಬ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯು ನಮ್ಮ ನೌಕರ
ವರ್ಗದವರನ್ನು ತೀವ್ರ ಮುಜುಗರಕ್ಕೆ ತಳ್ಳುತ್ತಿದ್ದು ಪ್ರತಿಯೊಬ್ಬ ನರೇಗಾ ನೌಕರರು ಒಂದಲ್ಲಾ ಒಂದು
ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದ್ದಾರೆ ಒಂದು ವಾರದೊಳಗೆ ವೇತನ ಪಾವತಿಯಾಗದೇ
ಇದ್ದಲ್ಲಿ, ನೌಕರರ ಆರ್ಥಿಕ ಪರಿಸ್ಥಿತಿ, ಮನೋಬಲ, ಆತ್ಮಸ್ಥೆರ್ಯ ಮತ್ತಷ್ಟು ಕುಸಿಯಲಿದೆ.

ಬಾಕಿ ವೇತನ ಪಾವತಿ ವಿಚಾರವಾಗಿ ಮೇಲಾಧಿಕಾರಿಗಳು ಕೇಂದ್ರ ಸರ್ಕಾರದಿಂದ ಅನುದಾನ
ಬಂದಿಲ್ಲ ಎಂದು ಇಲ್ಲಿಯವರೆಗು ಮಾಹಿತಿ ನೀಡುತ್ತಿದ್ದರು. ಪುಸ್ತುತ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ
ಅನುದಾನ ಬಿಡುಗಡೆಗೊಂಡಿದ್ದು, ರಾಜ್ಯದಿಂದ ಜಿಲ್ಲಾ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಿದೆ
ಎಂಬ ಮಾಹಿತಿ ನೀಡಿರುತ್ತಾರೆ.
ಆದರೇ ಹೊಸ ತಂತ್ರಾಂಶದಲ್ಲಿ ವೇತನ ಪಾವತಿ ಮಾಡಲು ತಾಂತ್ರಿಕ ಸಮಸ್ಯೆ ಬಗೆಹರೆಯದೇ
ಇರುವುದರಿಂದ ವೇತನ ಪಾವತಿಯು ವಿಳಂಬವಾಗುತ್ತಿದೆ.

ಪ್ರಸ್ತುತ ತಾಲ್ಲೂಕಿನಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಗಳು
ನಡೆಯುತ್ತಿರುವುದರಿಂದ ಕಾಮಗಾರಿ ಸ್ಥಳಕ್ಕೆ ಹೋಗಿ ಕಾಮಗಾರಿಗಳನ್ನು ತೋರಿಸುವುದಕ್ಕೂ ಸಹ
ಸಾಧ್ಯವಾಗುತ್ತಿಲ್ಲ. ಮೇಲಿನ ಎಲ್ಲಾ ನರೇಗಾ ಸಿಬ್ಬಂದಿಗಳು ಕ್ಷೇತ್ರ ಮಟ್ಟದಲ್ಲಿ ಕಾರ್ಯ
ನಿರ್ವಹಿಸುತ್ತಿರುವುದರಿಂದ ಕ್ಷೇತ್ರ ಭೇಟಿಯ ಸಮಯದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆ ಮತ್ತು
ಅಪಘಾತದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಗಣಿಸಿ ತುರ್ತಾಗಿ ಎಲ್ಲಾ ಸಿಬ್ಬಂದಿಗಳಿಗೆ ಅಪಘಾತ
ವಿಮಾ ಸೌಲಭ್ಯ ಹಾಗೂ ಸಾಮೂಹಿಕ ಕುಟುಂಬ ಆರೋಗ್ಯ ವಿಮಾ ಸೌಲಭ್ಯಗಳನ್ನು ನೀಡಲು
ವಿನಂತಿಸುತ್ತಾ
ಈ ಮೇಲಿನ ಅಂಶಗಳೆಲ್ಲವನ್ನು ಪರಿಗಣಿಸಿ ಕೂಡಲೇ ನರೇಗಾ ನೌಕರರ ಬಾಕಿ ವೇತನ
ಪಾವತಿ ಹಾಗೂ ಸಾಮೂಹಿಕ ಆರೋಗ್ಯವಿಮೆ ಮತ್ತು ಅಪಘಾತ ವಿಮಾ ಸೌಲಭ್ಯಗಳನ್ನು
ನೀಡಲು ಅಗತ್ಯಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ಪ್ರವೀಣ್ ಕುಮಾರ್ ಮಹೇಂದ್ರ ಇಂಜಿನಿಯರ್ ದಿನೇಶ್ ,ಮಂಜುನಾಥ್ , ಬಿಎಪ್ ಟಿ ಗಳು ಇತರರು ಇದ್ದರು.

About The Author

Namma Challakere Local News
error: Content is protected !!