ಚಳ್ಳಕೆರೆ :

ಚಳ್ಳಕೆರೆ: ಹಾಡುಹಗಲೇ ಮನೆ ದರೋಡೆ ಲಕ್ಷಾಂತರ
ಮೌಲ್ಯದ ಒಡವೆ ಕಳವು
ಚಳ್ಳಕೆರೆಯ ಹೊಟ್ಟೆಜ್ಜಪ್ಪನ ಕಪಿಲೆಯಲ್ಲಿ ಶ್ರೀನಿವಾಸ್ ಎಂಬುವರ
ಮನೆಗೆ ನುಗ್ಗಿದ ಕಳ್ಳರು, ಬೀಗ ಮುರಿದು ಲಕ್ಷಾಂತರ ರೂಪಾಯಿ
ಮೌಲ್ಯದ ಚಿನ್ನಾಭರಣ ಮತ್ತು ನಗದು ದರೋಡೆ ಮಾಡಿದ್ದಾರೆ.
ಶ್ರೀನಿವಾಸ್ ಅವರು ಹೊಲಕ್ಕೆ ಹೋಗಿದ್ದ ವೇಳೆ ಈ ಘಟನೆ
ನಡೆದಿದೆ. ಕಳ್ಳರು ಮೂರು ಜೊತೆ ಕಿವಿ ಓಲೆಗಳು ಮತ್ತು 5 ತೊಲ
ತೂಕದ ಲಾಂಗ್ ಚೈನ್ ಕದ್ದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ
ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ
ದಾಖಲಿಸಿಕೊಂಡಿದ್ದಾರೆ.

About The Author

Namma Challakere Local News
error: Content is protected !!