ಚಳ್ಳಕೆರೆ : ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಮುತ್ತಿಗೆ ಹಾಕಿದ ಜಿಲ್ಲಾ
ಬಂಜಾರ ಸಂಘ
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಿಇಓ, ಸಿಎಓ ಮತ್ತು ಡಿಎಸ್
ಭ್ರಷ್ಟ ಪಿಡಿಓಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ
ಜಿಲ್ಲಾ ಬಂಜಾರ ಸಂಘದ ಕಾರ್ಯಕರ್ತರು ಜಿಪಂಗೆ ಮುತ್ತಿಗೆ ಹಾಕಿ
ಪ್ರತಿಭಟನೆ ನಡೆಸಿದರು.
ಮಲ್ಲಪ್ಪನಹಳ್ಳಿ, ಭೀಮಸಮುದ್ರ ಮತ್ತು
ಸಿದ್ದಾಪುರ ಪಿಡಿಓಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ
ಕ್ರಮಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಕ್ರಮ ತೆಗೆದುಕೊಳ್ಳದ ಸಿಇಓ ನಮ್ಮ ಜಿಲ್ಲೆಗೆ ಬೇಡ ಎಂದು ಜಿಲ್ಲಾ
ಬಂಜಾರ ಸಂಘದ ಅಧ್ಯಕ್ಷ ಸತೀಶ್ ಆಗ್ರಹಿಸಿದರು.

