ಚಳ್ಳಕೆರೆ : ಚಿತ್ರದುರ್ಗ: ಮೋದಿ ಹುಟ್ಟು ಹಬ್ಬಕ್ಕೆ 10
ಕಾರ್ಯಕ್ರಮಗಳ ಆಯೋಜನೆ
ಚಿತ್ರದುರ್ಗ ಜಿಲ್ಲಾ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಣ್ಣ
ಅವರು ಪ್ರಧಾನಿ ಮೋದಿ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ
ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು
ತಿಳಿಸಿದರು. ಚಿತ್ರದುರ್ಗದಲ್ಲಿ ಮೋದಿ ಜನ್ಮದಿನಾಚರಣೆಯ
ಸಂದರ್ಭದಲ್ಲಿ ಮಾತನಾಡಿದ ಅವರು, ರಕ್ತದಾನ ಶಿಬಿರ, ಸ್ವಚ್ಛತೆ
ಮತ್ತು ಗಿಡ ನೆಡುವ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ
ಹಮ್ಮಿಕೊಳ್ಳಲಾಗುವುದು ಎಂದರು. ಇಂದು ಆರೋಗ್ಯ ತಪಾಸಣಾ
ಶಿಬಿರವನ್ನು ಆಯೋಜಿಸಲಾಗಿದೆ. ಅಲ್ಲದೆ, ಮೋದಿ ಅವರ
ಜನ್ಮದಿನದ ನಿಮಿತ್ತ ಮ್ಯಾರಥಾನ್ ಅನ್ನು ಸಹ ಆಯೋಜಿಸಲಾಗಿದೆ
ಎಂದು ಅವರು ಹೇಳಿದರು.

