ಯುವಕರು ಕ್ರೀಡಾ ಮನೊಭಾವ ಬೆಳೆಸಿಕೊಳ್ಳಬೇಕು ಕ್ರೀಡಾಪಟುಗಳಿಗೆ ಕಿವಿಮಾತು
: ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಓ ಶ್ರೀನಿವಾಸ
ನಾಯಕನಹಟ್ಟಿ
ಕ್ರೀಡಾಪಟುಗಳು ಸ್ನೇಹ ಪ್ರೀತಿ ಬೆಳೆಯಲು ಎಲ್ಲಾ ವರ್ಗದವರು ಇತಂಹ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಓ ಶ್ರೀನಿವಾಸ ಹೇಳಿದರು .
ಬುಧವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದ ಕ್ರಿಕೆಟ್ ಕ್ರೀಡಾಂಗಣ ಆವರಣದಲ್ಲಿ ಶ್ರೀ ಗಾದೀಶ್ವರ ಕ್ರಿಕೆಟ್ ವತಿಯಿಂದ ದಿವಂಗತ ಬಿ ಶೇಖರಪ್ಪ ಇವರ ಸ್ಮರಣಾತಕವಾಗಿ 8ನೇ ಬಾರಿಗೆ ಜಾಗನೂರಹಟ್ಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡಾಕೂಟವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಮತ್ತು ದೇಹದ ಬೆಳೆವಣಿಗೆಗೋಸ್ಕರ ಇತಂಹ ಕ್ರೀಡೆ ಚಟುವಟಿಕೆಗಳಲ್ಲಿ ತೂಡಗುವುದು ಉತ್ತಮ ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ ಒಳ್ಳೇಯ ಸಹಕಾರ ಮನೋಭಾವದೊಂದಿಗೆ ಕ್ರೀಡಾಪಟುಗಳಿಗೆ ತಿಳಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಬಸಪ್ಪ ನಾಯಕ ಮಾತಾನಾಡಿ ಜಾಗನೂರಹಟ್ಟಿ ಮಾದಯ್ಯನಹಟ್ಟಿ ಗ್ರಾಮದ ಯುವಕರು ಪ್ರತಿವರ್ಷ ಇಂತಹ ಕ್ರೀಡೆಗಳನ್ನು ಆಯೋಜಿಸಿದ್ದು ಸಂತಸ ತಂದಿದೆ, ಆ ಗ್ರಾಮದ ಅಭಿಮಾನಿ ಶೇಖರ್ ಜ್ಞಾನಪರ್ಕವಾಗಿ ಕ್ರೀಕೆಟ್ ಆಯೋಜಿಸಿದ್ದಾರೆ ಕ್ರೀಡಾಪಟುಗಳು ದೇಹದ ಬೆಳವಣಿಗೆ ಕ್ರೀಡೆ ಬಹಳ ಅತ್ಯಾಮೂಲ್ಯವಾದದ್ದು, ಕ್ರೀಡಾಪಟುಗಳು ಸೋಲು ಸಮಾನುವಾಗಿ ಸ್ವೀಕರಿಸಿ ರಾಜ್ಯ ರಾಷ್ಟ್ರ ಮಟ್ಟಗಳಲ್ಲಿ ಹೊರಹುಮ್ಮಲಿ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಎಂ.ಟಿ ಮಂಜುನಾಥ ಮಾತಾನಾಡಿ ಕ್ರೀಡಾಪಡುಗಳಿಗೆ ಜಾಗನೂರಹಟ್ಟಿ ಕ್ರಿಡಾಂಗಣ ಕೊರತೆ ಇದೆ ಮುಖ್ಯಾಧಿಕಾರಿಗಳು ಸ್ಥಳವನ್ನು ಗುರುತಿಸಿ ಕ್ರೀಡಾಂಗಣವನ್ನು ಅಯೋಜನೆ ಮಾಡಬೇಕು ಇಲ್ಲಿನ ಸರ್ಕಾರಿ ಜಮೀನು ಇದ್ದು ಕ್ರೀಡಾಂಗಣ ಕಲ್ಪಸಿಕೊಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ ತಿಪ್ಪೇಸ್ವಾಮಿ, ಗ್ರಾಮಸ್ಥರಾದ ಮಾಜಿ ತಾಲ್ಲೂಕ ಪಂಚಾಯತಿ ಸದಸ್ಯ ಎಸ್ ಓಬಯ್ಯ, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರಾದ ಗೊಂಚಿಗಾರ ಪಾಲಯ್ಯ, ಸಣ್ಣಜ್ಜಯ್ಯ, ತಿಪ್ಪೇಸ್ವಾಮಿ, ಶ್ರೀಮತಿ ತಿಪ್ಪಮ್ಮ ಬಡ ಸೂರಯ್ಯ, ಪಿ ತಿಪ್ಪೇಸ್ವಾಮಿ, ಸಿ ಬಿ ಪಾಲಯ್ಯ, ಮಾಜಿ ಪಟ್ಟಣ ಪಂಚಾಯ್ತಿ ಸದಸ್ಯೆ ಸಿದ್ದಲಿಂಗಮ್ಮ ನಾಗರಾಜ, ಕರವೇ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ, ಕರವೇ ಹೋಬಳಿ ಅಧ್ಯಕ್ಷ ಪ್ರಕಾಶ, ಕರವೇ ಕನ್ನಡ ಸೇನೆ ಹೋಬಳಿ ಅಧ್ಯಕ್ಷ ಕೆ.ಜಿ ಮಂಜಣ್ಣ,ಕರವೇ ಹೋಬಳಿ ಉಪಾಧ್ಯಕ್ಷ ಕೆ.ಪಿ ನಾಗರಾಜ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಸಂಜೀವಿನಿ ಯುವ ಅಧ್ಯಕ್ಷ ಪ್ರಸನ್ನ ಕುಮಾರ್, ಕರವೇ ಪ್ರಧಾನ ಕಾರ್ಯದರ್ಶಿ ಸುರೇಶ್, ಕಾಟಯ್ಯ ತಂಡದ ಮಾಲೀಕರಾದ ತೇಜಸ್ ಕಂಪ್ಯೂಟರ್ ಪಾಪಣ್ಣ, ಸುರೇಶ್ ಎಬಿಎಲ್, ರವಿ, ರಘು, ಕೊಟ್ರೇಶ್, ಕೆ.ಪಿ ತಿಪ್ಪೇಸ್ವಾಮಿ, ಕ್ರೀಡಾಭಿಮಾನಿಗಳು ಹಾಗೂ ಸಮಸ್ತ ಗ್ರಾಮಸ್ಥರು ಇದ್ದರು.

