ಚಳ್ಳಕೆರೆ :
ಚಳ್ಳಕೆರೆ ನಗರಸಭೆ ಯಲ್ಲಿ
ಕೌನಿಲ್ ವಿಶೇಷ ತುರ್ತು ಸಭೆ
ನಗರಸಭೆ ಕಛೇರಿಯ
ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷರಾದ ಆರ್.ಮಂಜುಳ ಪ್ರಸನ್ನಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕೌನ್ಸಿಲ್
ವಿಶೇಷ ತುರ್ತು ಸಭೆಯನ್ನು ನಡೆಸಲಾಯಿತು.
ಇನ್ನೂ ಸಭೆಯಲ್ಲಿ
ಚಳ್ಳಕೆರೆ ನಗರದ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಘಟಕ, ಒಣ ತ್ಯಾಜ್ಯ ಸಂಗ್ರಹಣಾ ಘಟಕ ಹಾಗೂ ಘನತ್ಯಾಜ್ಯದ ಘಟಕದ
ನಿರ್ವಹಣೆಗಾಗಿ ಅವಶ್ಯವಿರುವ 72 ಸಂಖ್ಯೆಯ ಸಹಾಯಕರು/ಚಾಲಕರು/ಆಪರೇಟರ್ ಅನ್ನು ಹೊರಗುತ್ತಿಗೆ ಆಧಾರದಂತೆ
ಮಾಡುವ ಕಾಮಗಾರಿಯ (ಇಂಡೆಂಟ್ ಸಂ:DMA/2024-25/SE4460) ಟೆಂಡರ್‌ನಲ್ಲಿ ಸಲ್ಲಿಕೆಯಾದ
ದರೆಗಳಿಗೆ ದರ ಅನುಮೋದನೆ ನೀಡುವ ಕುರಿತು ಚರ್ಚಿಸಲಾಯಿತು.
ನಂತರ
- ಕಛೇರಿಯ ಘನತ್ಯಾಜ್ಯ ವಸ್ತು ನಿರ್ವಹಣೆಯ ವಾಹನಗಳಿಗೆ ಜಿ.ಪಿ.ಎಸ್ ಯಂತ್ರವನ್ನು ಆಳವಡಿಸುವ ಕುರಿತು ಸಭೆಗೆ ಮಾಹಿತಿ ನೀಡಿದರು.
ಇದೇ ಸಂಧರ್ಭದಲ್ಲಿ ನಗರ ಸಭೆಯ ಉಪಾಧ್ಯಕ್ಷರಾದ ಕವಿತಾ, ಸದಸ್ಯ ರಮೇಶ್ ಗೌಡ, ವೀರಭದ್ರಪ್ಪ, ಶ್ರೀನಿವಾಸ್, ಜಯಣ್ಣ, ವೆಂಕಟೇಶ ಸುಜತಾ, ಜಯಲಕ್ಷ್ಮಿ, ಶಿಲ್ಪ, ಪೌರಾಯುಕ್ತ ಜಗರೆಡ್ಡಿ, ಸ್ಥಾಯಿ ಸಮಿತಿ ಸದಸ್ಯರುಗಳು ಸಿಬ್ಬಂದಿ ವರ್ಗ ಹಾಜರಿದ್ದರು.

