ಚಳ್ಳಕೆರೆ :
ಶ್ರೀ ಮಹಾಲಕ್ಷ್ಮಿ ದೇವಿ ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ಈ ಶುಕ್ರವಾರದ ದಿನ ಸಂಜೆ ಸಭೆ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಚಿತ್ತರಗಿ ಶ್ರೀ ವಿಜಯ ಮಾಂತೇಶ್ವರ ಸಂಸ್ಥಾನ ಶಾಖ ಮಠದ ಶ್ರೀ ಶ್ರೀ ಬಸವಲಿಂಗ ಸ್ವಾಮೀಜಿ. ಸಿದ್ದಯ್ಯನಕೋಟೆ ಇವರ ಸಾನಿಧ್ಯದಲ್ಲಿ ನಡೆಯಿತು
ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಂಚಾಲಕರಾದ ಬಿ.ಸಿ. ಸಂಜೀವಮೂರ್ತಿ , ಸ್ವಾಮೀಜಿಗಳ ಪಾದಾರಗಳಿಗೆ ವಂದಿಸಿದರು ಹಾಗೂ ದೇವಸ್ಥಾನದ ಗೌರವಾಧ್ಯಕ್ಷರು ಅಧ್ಯಕ್ಷರು ಪಾದಾಧಿಕಾರಿಗಳು ಮತ್ತು ಸಲಹಾ ಸಮಿತಿ ಸದಸ್ಯರುಗಳಿಗೆ ವಂದಿಸಿ. ಹಾಗೂ ವಿಶೇಷವಾಗಿ ದೇವಸ್ಥಾನದ ಪ್ರತಿಷ್ಠಾಪನೆಗೆ ಶ್ರಮಿಸುತ್ತಿರುವ ಎಲ್ಲಾ ಪಾದಾಧಿಕಾರಿಗಳಿಗೂ ಮತ್ತು ಶಿವನಗರ ಕ್ಷೇಮಾಭಿವೃದ್ಧಿ ಸಂಘದವರಿಗೂ ವಂದನೆಗಳನ್ನು ತಿಳಿಸಿದರು.
ಈ ಲಕ್ಷ್ಮಿ ದೇವಿಯ ದೇವಸ್ಥಾನ ನಿರ್ಮಾಣಕ್ಕೆ ಮುಖ್ಯ ಕಾರಣ ಈ ಒಂದು ದೇವಸ್ಥಾನದ ನಮ್ಮ ಗೌರವಾಧ್ಯಕ್ಷರಾದ ಟಿ.ಪ್ರಭುದೇವ್ ಅಣ್ಣನವರು ಕಾರಣಕರ್ತರೆಂದು ತಿಳಿಸಿದರು.

