ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಪ್ರಯುಕ್ತ ಪಟ್ಟಣದಲ್ಲಿ ಎಸ್ ಪಿ ರಂಜಿತ್ ಕುಮಾರ್ ಬಂಡಾರು ಫುಲ್ ರೌಂಡ್ಸ

ನಾಯಕನಹಟ್ಟಿ:: ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ವರಿಷ್ಠ ಅಧಿಕಾರಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ರವರು ಶುಕ್ರವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಜಾತ್ರೆಯ ಪ್ರಯುಕ್ತ ಸಕಲ ಸಿದ್ಧತೆಗಳು ಹಾಗೂ ಸೂಕ್ತ ಬಂದ್ ಬಸ್ತ್ ನೀಡುವ ಸಲುವಾಗಿ ಶುಕ್ರವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ತೇರು ಬೀದಿ ಪಾದಗಟ್ಟೆ ಹಾಗು ಚಿಕ್ಕ ಕೆರೆಯ ಏರಿಯ ಮೇಲೆ ಸ್ಥಳ ಪರಿಶೀಲನೆಯನ್ನು ನಡೆಸಿದರು,

ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯ ಎಚ್ ಗಂಗಾಧರಪ್ಪ, ಸಿಬ್ಬಂದಿ ಎಸ್ ಸತೀಶ್, ಡಿವೈಎಸ್ಪಿ
ಟಿ ರಾಜಣ್ಣ, ತಳಕು ಮತ್ತು ನಾಯಕನಹಟ್ಟಿ ವೃತ್ತ ನಿರೀಕ್ಷಕ ಹನುಮಂತಪ್ಪ ಶೀರಿಹಳ್ಳಿ, ಪಿಎಸ್ಐ. ದೇವರಾಜ್, ಎಎಸ್ಐ ತಿರುಕಪ್ಪ, ಇದ್ದರು.

About The Author

Namma Challakere Local News
error: Content is protected !!