“ಕರುಣೆಯ ಮೂರುತಿ ಶಾರದೆ”- ಯತೀಶ್ ಎಂ ಸಿದ್ದಾಪುರ ಅನಿಸಿಕೆ. ಚಳ್ಳಕೆರೆ:-ಕರುಣೆಯ ಸಾಕಾರ ಮೂರ್ತಿ ಶ್ರೀಮಾತೆ ಶಾರದಾದೇವಿಯವರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ತಿಪ್ಪಮ್ಮ ಉಮಾಶಂಕರ್ ಅವರ ಸೂಜಿಮಲ್ಲೇಶ್ವರ ನಿವಾಸದಲ್ಲಿ ಆಯೋಜಿಸಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು”ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣವನ್ನು ಮಾಡುತ್ತ ಮಾತನಾಡುತ್ತಿದ್ದರು. ತಮ್ಮ ಬಳಿಗೆ ಬಂದ ಭಕ್ತರ ಮೇಲೆ ಶಾರದಾಮಾತೆಯವರು ಹರಿಸುತ್ತಿದ್ದ ಕರುಣೆ ಅಹೇತುಕವಾದದ್ದು. ಅವರು ಮಾತೃತ್ವದ ಮೂರ್ತರೂಪವೇ ಆಗಿದ್ದರು ಎಂದು ಹೇಳಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಸತ್ಸಂಗದಲ್ಲಿ ಸದ್ಭಕ್ತರಾದ ಶ್ರೀಮತಿ ತಿಪ್ಪಮ್ಮ ಉಮಾಶಂಕರ್, ಎಂ ಗೀತಾ ನಾಗರಾಜ್, ಬಿ.ಟಿ.ಗಂಗಾಂಬಿಕೆ ರವಿ, ಗೀತಾ ಸುಂದರೇಶ್ ದೀಕ್ಷಿತ್,ಗಿರಿಜಾ ಜಗದೀಶ್ ಉಪಸ್ಥಿತರಿದ್ದರು.

