ಹೊಸದುರ್ಗ: ಕರಡಿ ಹಾವಳಿ ತಪ್ಪಿಸಿ ಜೀವ ಉಳಿಸಿ
ಹೊಸದುರ್ಗದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಇತ್ತೀಚಿನ
ದಿನಗಳಲ್ಲಿ, ರಾತ್ರಿ ವೇಳೆಯಲ್ಲಿ ಕರಡಿಯ ಹಾವಳಿ ಹೆಚ್ಚಾಗಿದೆ.
ಇದರಿಂದ ರಾತ್ರಿ ವೇಳೆಯಲ್ಲಿ ಜನರು ಮನೆಯಿಂದ ಹೊರಗೆ ಬರಲು
ಭಯ ಭೀತರಾಗಿದ್ದಾರೆ. ಹಲವಾರು ಬಾರಿ ಅರಣ್ಯ ಇಲಾಖೆಗೆ
ಕರಡಿಯನ್ನ ಹಿಡಿದು ಬೇರೆಡೆಗೆ ಸಾಗಿಸುವಂತೆ ಮನವಿ ಮಾಡಿದ್ದರು
ಪ್ರಯೋಜನವಾಗಿಲ್ಲ. ಕರಡಿಯಿಂದ ಜನರಿಗೆ ಅನಾಹುತವಾಗುವ
ಮುನ್ನ ಅರಣ್ಯ ಇಲಾಖೆ ಕರಡಿಯನ್ನು ಹಿಡಿದು, ಜನರ ಪ್ರಾಣ
ರಕ್ಷಸಬೇಕೆಂದು ಬಡಾವಣೆಯ ಜನರು ಆಗ್ರಹಿಸಿದ್ದಾರೆ.

