ಚಳ್ಳಕೆರೆ :
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಚಳ್ಳಕೆರೆ ತಾಲ್ಲೂಕು ಕಛೇರಿಯಲ್ಲಿ ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಕೃಷಿ ಜಂಟಿ ನಿರ್ದೇಶಕರು ಕಚೇರಿಗೆ ಕಾರ್ಯನಿರ್ವಹಿಸುತ್ತಿರುವ ದಿನಗಳಿಂದ ರೈತರ ಬಗ್ಗೆ ಅನೋಕ್ಷಿತ ವರ್ತನೆ ಮತ್ತು ಬೀಜ ಗೊಬ್ಬರ ಕಳೆಪೆ ಬಗ್ಗೆ ದೂರು ನೀಡಿ ಕಚೇರಿಗೆ ಹೋದಾಗ ಅಸಭ್ಯವಾಗಿ ಒಪ್ಪಿಸಿದ್ದು ಇವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.

ಕಳೆದ 19-06-2025 ರಂದುಜಂಟಿ ಕೃಷಿ ನಿರ್ದೇಶಕರ ಕಚೇರಿಯ ಮುಂದೆ ಚಳುವಳಿಯನ್ನು ಮಾಡಲಾಗಿತ್ತು ಆದರೆ ಕೆಲವೇ ಕೆಲವು ಸಂಘಟನೆಗಳು ಚಳುವಳಿ ಮಾಡಿದವರನ್ನು ಗೂಂಡಾಗಳು ಎಂದು ಹೇಳಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಯಿತು

ಇದೆ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರು ಜಿಲ್ಲೆಯಲ್ಲಿ ಪಾದ ಗ್ರಹಣ ಮಾಡಿದಾಗ ಒಂದೇ ಒಂದು ಗೊಬ್ಬರದ ಅಂಗಡಿಗಳಿಗೆ ಹೋಗಿ ಪರಿಶೀಲನೆ ಮಾಡಿಲ್ಲ
ಗೊಬ್ಬರ ಅಂಗಡಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ರೈತರನ್ನು ಅಲೆದಾಡಿಸುತ್ತಿದ್ದಾರೆ ಎಂದು ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಆರೋಪಿಸಿದ್ದಾರೆ

ಇದೇ ಸಂಧರ್ಭದಲ್ಲಿ ಮುಖಂಡರು ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಜಿಲ್ಲಾಧ್ಯಕ್ಷರಾದ ಡಿ ಎಸ್ ಹಳ್ಳಿ ಮಲ್ಲಿಕಾರ್ಜುನ್ ಕಾರ್ಯದರ್ಶಿಗಳಾದ ಮಲ್ಲಹಳ್ಳಿ ರವಿಕುಮಾರ್ ಬಾಗೇನಾಳ್ ತಿಪ್ಪೇಸ್ವಾಮಿ ಎಸ್ ಆರ್ ತಿಮ್ಮಯ್ಯ ಭದ್ರಾ ಮೇಲ್ದಂಡೆ ಜಿಲ್ಲಾಧ್ಯಕ್ಷರು ಚಿಕ್ಕಪ್ ಗೆರೆ ನಾಗರಾಜ್ ಮುದ್ದಾಪುರ ನಾಗಣ್ಣ ಎಲ್ ಬಸವರಾಜಪ್ಪ ಅಳಿಯೂರು ಸಿದ್ದಣ್ಣ ರಾಮರೆಡ್ಡಿ ಚಿಕ್ಕಪ್ ಗೆರೆ ರಾಜಣ್ಣಬಾಗೇನಾಳ್ ಬಸಪ್ಪ ಲಕ್ಷ್ಮಿಕಾಂತ್ ಸೂರಪ್ಪ ನಾಯಕ
ಟಿ ವೆಂಕಟೇಶ್ ತಿಮ್ಮೇಶ್ ತಿರುಮಲಾಪುರ ಸಿದ್ದರಾಮಣ್ಣ ಹೊಳಲ್ಕೆರೆ ಹಾಡನೂರು ಶಿವಕುಮಾರ್ ವೀರಣ್ಣ ಹೊಸಳ್ಳಿ ಮುಂತಾದ ಮುಖಂಡರುಗಳು ಭಾಗವಹಿಸಿದ್ದರು

About The Author

Namma Challakere Local News
error: Content is protected !!