“ಶಾರದಾಮಾತೆ ಅವರ ಜೀವನಾದರ್ಶಗಳನ್ನು ಪಾಲಿಸಿ”-ಸದ್ಭಕ್ತರಿಗೆ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಕರೆ.
ಚಳ್ಳಕೆರೆ-ಶ್ರೀಮಾತೆ ಶಾರದಾದೇವಿ ಅವರ ಜೀವನಾದರ್ಶಗಳನ್ನು ಪಾಲಿಸುವ ಮೂಲಕ ಸಾರ್ಥಕ ಬದುಕನ್ನು ನಡೆಸುವಂತೆ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಸದ್ಭಕ್ತರಿಗೆ ಕರೆ ನೀಡಿದರು.
ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಶ್ರೀಶಾರದಾದೇವೀ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಪ್ರವಚನ ನೀಡಿದರು. ಈ
ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಸತ್ಸಂಗ ಕಾರ್ಯಕ್ರಮದಲ್ಲಿ ಗೌರಮ್ಮ, ರಶ್ಮಿ ವಸಂತ,ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ, ದ್ರಾಕ್ಷಾಯಣಿ ವಿಜಯೇಂದ್ರ, ಶಾರದಾಮ್ಮ, ಸಂಗೀತ ವಸಂತಕುಮಾರ್, ಶೈಲಜ ಶ್ರೀನಿವಾಸ್, ಕೃಷ್ಣವೇಣಿ ವೆಂಕಟೇಶ್, ಸೌಮ್ಯ ಪ್ರಸಾದ್, ವಿಜಯಲಕ್ಷ್ಮಿ ರಾಮರೆಡ್ಡಿ,ಉಷಾ ಶ್ರೀನಿವಾಸ್ ಪಾಲ್ಗೊಂಡಿದ್ದರು.

