ಚಳ್ಳಕೆರೆ :
ಚಿತ್ರದುರ್ಗ: ಕೊರಚ ಎಂದೆ ಬರೆಸಬೇಕು
ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡುವ ಕೆಲಸಕ್ಕೆ
ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಾತಿ ಜನಗಣತಿ ಸಮೀಕ್ಷೆ
ಮಾಡಲು ಅಧಿಕಾರಿಗಳ ಮನೆ ಬಾಗಿಲಿಗೆ ಬಂದಾಗ ಜಾತಿ ಕಾಲಂ
ನಲ್ಲಿ ಕೊರಚ ಎಂದು ಬರೆಯುಸುವಂತೆ ಅಖಿಲ ಕರ್ನಾಟಕ ಕೊರಚ
ಮಹಾಸಭಾದ ರಾಜ್ಯ ಪ್ರಧಾನಕಾರ್ಯದರ್ಶಿ ವೈ ಕುಮಾರ್
ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,
ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯ ಅಭಿವೃದ್ಧಿ
ಹೊಂದಲು ಒಳಮೀಸಲಾತಿ ಅಗತ್ಯವಿದೆ. ಸರಿಯಾಗಿ ಜಾತಿ
ನಮೂದಿಸಿ ಎಂದರು.

