filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಚಳ್ಳಕೆರೆ : ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಆಮ್ಮಿಕೊಂಡಿದ್ದ ಏಳನೇ ವರ್ಷದ ವಿಶ್ವ ಹಿಂದೂ ಮಹಾಗಣಪತಿಯ ಮಹೋತ್ಸವದ ಬೃಹತ್ ಶೋಭಾಯಾತ್ರೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ಸಾಗಿತು.

ನಗರದ ಕ್ಷೇತ್ರ ಶಿಕ್ಷಣಾಧಿಗಳ ಕಛೇರಿ ಆವರಣದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಏಳನೇ ಭಾರಿಗೆ ವಿಶ್ವ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದ್ದರು ಸೆ.6ರ ಶನಿವಾರ ಶೋಭಾಯಾತ್ರೆಗೆ ಹಲವು ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು.

ನಗರದ ಬಿಇಓ ಆವರಣದಿಂದ ಚಾಲನೆಗೊಂಡ ಮೆರವಣಿಗೆ ವಾಲ್ಮೀಕಿ ವೃತ್ತದಿಂದ ಅಂಬೇಡ್ಕೆರ್ ವೃತ್ತ ಹಾಗೂ ನೆಹರು ವೃತ್ತ, ಬಸವೇಶ್ವರ ವೃತ್ತದಿಂದ ವಾಪಸ್‌ಹಾಗಿ ಮತ್ತೆ ಬಳ್ಳಾರಿ ರಸ್ತೆಯ ಮೂಲಕ ಸಾವಿರಾರು ಜನಸಾಗರದ ಮೂಲಕ ಸಾಗಿತು ಈ ಬೃಹತ್ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಭಾಗದ ಪಡ್ಡೆ ಹುಡುಗರು, ಹುಡುಗಿಯರು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿ ಕಂಡು ಬಂದಿತು,

ಪೊಲೀಸ್ ಇಲಾಖೆ ಡಿಜೆ ಸೌಂಡ್ ಗೆ‌ಪರವಾನಿಗೆ ನೀಡದೆ ಇರುವುದರಿಂದ ಕಂಸಾಳೆ, ಊರುಮೆ, ಡ್ರಮ್, ಬಾರಿಸುವ ಮೂಲಕ
ಹದಿಹರೈಯದವರು ಜೊತೆಗೆ ಮಹಿಳೆಯರು ಹೆಜ್ಜೆಹಾಕಿದರು.

ಮೆರವಣಿಗೆಯಲ್ಲಿ ಡೋಲುಕುಣಿತ, ವಾಧ್ಯವೃಂಧ, ಮಹಿಳೆಯರ ಕೋಲಾಟ,, ವಿಶೇಷವಾಗಿ ಕಂಡುಬಂದಿತು.

ನಗರದ ಪ್ರಮುಖ ರಾಜ ಬೀದಿಗಳಲ್ಲಿ ಬೃಹತ್ ಮೆರವಣಿಗೆಗೆ ತಾಲೂಕಿನ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಸಾಕ್ಷಿಯಾಯಿತು.

ಉತ್ಸವ ಸಮಿತಿ ಅಧ್ಯಕ್ಷ ‌ಶಿವಪುತರಪ್ಪ
ಶೋಭಾಯಾತ್ರೆಯ ಅಧ್ಯಕ್ಷ ಎವಿಬಿಪಿ ಮಂಜುನಾಥ್, ಮಾತ್ರ ಶ್ರೀ ಮಂಜುನಾಥ್, ಬೇಕರಿ ಮಂಜುನಾಥ್, ಹಿತೇಶ್ ಜೈನ್,ಚಿದಾನಂದ್, ಸುರೇಂದ್ರ, ಮೋಹನ್ ಕುಮಾರ್, ಉಮೇಶ್, ಮನೋಜ್ ಹೊಸಮನೆ, ಶ್ರೀಧರ್, ಜಿಪಂ.ಮಾಜಿ ಸದಸ್ಯ ಜಿ.ಪಿ.ಜಯಪಾಲಯ್ಯ, ಬಾಳೆಕಾಯಿ ವೆಂಕಟೇಶ್,ಎಸ್.ಎಂ.ಗಂಗಾಧರ, ಕೆ.ಎಂ.ಯತೀಶ್,, ಕಾರ್ತಿಕ್ ಸಂಜೀವಮೂರ್ತಿ, ಶಿವಪುತ್ರಪ್ಪ, ಶ್ರೀನಿವಾಸ್, ಭಾಗವಸಿದ್ದರು.

ಮಜ್ಜಿಗೆ ವಿತರಣೆ :
ಹಿಂದೂ ಮಹಾಗಣಪತಿ ಸಾಗುವ ದಾರಿ ಮಧ್ಯದುಕ್ಕೂ ದಾನಿಗಳು , ವಾಹನ ಚಾಲಕರು ಹಾಗೂ ಮುಸ್ಲಿಂ ಭಾದವರು ಇತರೆ ಹಲವು ಸಂಘ ಸಂಸ್ಥೆಗಳು ಮಜ್ಜಿಗೆ, ನೀರು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಿಗಿ ಪೊಲೀಸ್ ಬಂದ್‌ಬಸ್ತ್ :

ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜ್ರಾಗತ ಕ್ರಮವಾಗಿ ಬಿಎಸ್‌ಎಪ್, ಸಿಪಿಐ., ಪಿಎಸ್‌ಐ., ಎಎಸ್‌ಐ., ಹೆಚ್‌ಸಿ-ಪಿಸಿ., ಮಹಿಳಾ ಪೊಲೀಸ್, ಹೆಚ್‌ಸಿ. ನೆಮಿಸಿಲಾಗಿತ್ತು, ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಸಾಗುವ ಸ್ಥಳಗಳಲ್ಲಿ ಹೈ ಅಲರ್ಟ್ ಮಾಡಲಾಗಿತ್ತು. ಡಿವೈಎಸ್‌ಪಿ ಬಿಟಿ.ರಾಜಣ್ಣ, ವೃತ್ತ ನಿರೀಕ್ಷಕ ಕೆ.ಕುಮಾರ್, ಪಿಎಸ್‌ಐ. ಈರೇಶ್, ಪಿಎಸ್‌ಐ ಶಿವರಾಜ್, ತಳಕು, ಪರುಶುರಾಂಪುರ ಠಾಣೆಯ , ಸಿಬ್ಬಂದಿ ಯೊಂದಿಗೆ ಭದ್ರತೆಯಿಂದ ಮೆರವಣಿಗೆ ಸಾಗಿತು.

ಪೋಟೋ.1.ಚಳ್ಳಕೆರೆ ನಗರದ ವಿಶ್ವಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ನೆರೆದಿದ್ದ ಜನಸ್ತೋಮ

ಪೋಟೋ._2.ಚಳ್ಳಕೆರೆ ನಗರದ ವಿಶ್ವಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ಮಹಿಳಾ ಮಣಿಗಳು.

About The Author

Namma Challakere Local News
error: Content is protected !!