ಚಳ್ಳಕೆರೆ : ಡಿಜೆಗಾಗಿ ಮೂರು ಗಂಟೆಗಳ ಕಾಲ ಪೋಲಿಸ್ ಠಾಣೆ ಮುಂದೆ ಗಣೇಶ ಉತ್ಸವದೊಂದಿಗೆ ಪ್ರತಿಭಟನೆ
ಹೌದು ಚಳ್ಳಕೆರೆ ನಗರದ ವಿಶ್ವಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಸೆ.6 ರಂದು ನಿಗಧಿಯಾಗಿ 11 ಗಂಟೆಗೆ ಪ್ರಾರಂಭವಾಗಿ ವಾಲ್ಮೀಕಿ ವೃತ್ತದಿಂದ ಅಂಬೇಡ್ಕರ್ ವೃತ್ತ, ಮೂಲಕ ಡೊಳ್ಳು, ಉರುಮೆ ವಾದ್ಯ ದ ಮೂಲಕ ಮೆರವಣಿಗೆ ಆಗಮಿಸುತಿತ್ತು ಆದರೆ ಪಡ್ಡೆ ಯುವಕರು ಗುಂಪು ಡಿಜೆ ಸೌಂಡ್ ಬೇಕೇ ಬೇಕು ಎಂದು ಕೆಲ ಕಾಲ ಪಟ್ಟು ಹಿಡಿದರು.
ಆದರೆ ಹೈ ಕೋರ್ಟ್ ಆದೇಶ ಪಾಲಿಸಬೇಕು, ಸರಕಾರ ಡಿಜೆಗೆ ಪರವಾನಿಗೆ ನೀಡಬೇಡಿ ಎಂಬ ಆದೇಶ ಇದೆ ಎಂದು ಪೋಲಿಸರು ಮನವೋಲಿಸಿ ಕರೆದೊಯ್ದರು ಆದರೆ ಮರು ಅಂಬೇಡ್ಕರ್ ವೃತ್ತದ ಮೂಲಕ ಪೋಲಿಸ್ ಠಾಣೆ ಸಮೀಪಿಸುತ್ತಿದ್ದಂತೆ ಯುವಕರು ಗುಂಪು ಗಣೇಶ ಉತ್ಸವ ವನ್ನು ತಡೆದು ಡಿಜೆ ಸೌಂಡ್ ಬೇಕು ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಇನ್ನೂ ಡಿವೈಎಸ್ ಪಿ ಬಿಟಿ.ರಾಜಣ್ಣ, ಪಿಐ ಕೆ.ಕುಮಾರ್ ಎಷ್ಟೆ ಗಣೇಶ ಉತ್ಸವದ ಸಂಘಟನಕಾರರನ್ನು ಮನವೊಲಿಸಲು ಪ್ರಯತ್ನಿಸಿದರು ಸಾಫಲ್ಯ ಕಾಣಲಿಲ್ಲ. ಇನ್ನೂ ಸ್ಥಳಕ್ಕೆ ಅಡಿಷನಲ್ ಎಸ್ಪಿ ಶಿವಕುಮಾರ್, ಬೇಟಿ ನೀಡಿ, ಸಂಘಟನಕಾರರೊಂದಿಗೆ ಚರ್ಚಿಸಿ ಮನವೊಲಿಸಿದರು.. ನಂತರ ಸಂಘಟನಕಾರು ಒಬ್ಬೊಬ್ಬರಾಗಿ ಉತ್ಸವದ ಕಡೆ ಮುಖಮಾಡಿ ಬಂದದಾರಿಗೆ ಸುಂಖವಿಲ್ಲ ಎಂದು ಉತ್ಸವವದ ಮುಂದೆ ಬಂದು ಡೊಳ್ಳು ಉರುಮೆ ಸದ್ದಿಗೆ ಹೆಜ್ಜೆ ಹಾಕಿದರು.
ಆದರೂ ಪಟ್ಟು ಬಿಡದ ಕೆಲ ಯುವಕರ ಡಿಜೆ ಬೇಕು ಎಂದು ಘೋಷಣೆಗಳನ್ನು ಮೊಳಗಿಸಿದರು.
ಇನ್ನೂ ಕುದ್ದಾಗಿ ಎಸ್ಪಿ ಶಿವಕುಮಾರ್ , ಡಿವೈಎಸ್ ಪಿ ಹಾಗೂ ಪಿಎಸ್ಐಗಳು ಸ್ಥಳದಲ್ಲಿ ಇದ್ದು ಗಣೇಶ ಉತ್ಸವವನ್ನು ಮುಂದೆ ಸಾಗಿಸಿದರು.


