ಚಳ್ಳಕೆರೆ :

ನಾಡಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಂಕ್ರಾಂತಿ ರಂಗೋಲಿಯಲ್ಲಿ ವಿಶೇಷತೆ ಹಾಗೂ ವಿಭಿನ್ನ ಶೈಲಿಯಲ್ಲಿ ಮಹಿಳೆಯರು ಬಿಡಿಸಿರುವುದು ಕಂಡು‌ಬಂದಿದೆ.

ಹೌದು ಚಳ್ಳಕೆರೆ ನಗರದ ತ್ಯಾಗರಾಜನಗರದ ಮಲ್ಲೇಶ್ವರ, ಶಿವಲೀಲಾ, ಎಂಬುವವರ ಮನೆಯ ಮುಂದೆ 2026 ನೇ ಸಂಕ್ರಾಂತಿಗೆ ಕುಂಭ ಮೇಳದ ಸಾದುಗಳ ಚಿತ್ರ ಬಿಡಿಸುವ ರಂಗೋಲಿ ನೋಡುಗರ ಕಣ್ಮನ ಸೆಳೆಯುತ್ತದೆ.

ಅದರಂತೆ ಕಳೆದ ಹಲವು ವರ್ಷಗಳಿಂದ ಸಂಕ್ರಾಂತಿ ಹಬ್ಬದಂದು ವಿಭಿನ್ನ ಹಾಗೂ ವಿಶೇಷವಾದ ರಂಗೋಲಿ ಹಾಕುವಲ್ಲಿ ಇಲ್ಲಿನ ಮಹಿಳಾ ಮಣಿಯರು ಮುಂಚೂಣಿಯಲ್ಲಿ ಇದ್ದಾರೆ.

ಅದರಂತೆ ಪ್ರತಿ ವರ್ಷವೂ ಕೂಡ ಒಂದು ವಿಶೇಷವಾದ ರಂಗೋಲಿ ಬಿಡಿಸುವ ಮೂಲಕ ಮಾದರಿಯಾಗಿದ್ದಾರೆ.

ಅದರಂತೆ ಈ ಬಾರಿ ಕುಟುಂಬದ ಸಹಕಾರ ದೊಂದಿಗೆ ವೇದಾ ರವರು ಕುಂಬಮೇಳದ ಸಾಧುಗಳ ಚಿತ್ರ ಬಿಡಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನೂ ವೇದಾರವರು ಮಾತನಾಡಿ, ಪ್ರತಿವರ್ಷವೂ ಕೂಡ ಆಯಾ ವರ್ಷದ ವಿಶೇಷತೆಯನ್ನು ರಂಗೋಲಿ ಮೂಲಕ ಚಿತ್ರಿಸುವುದು ಹವ್ಯಾಸವಾಗಿದೆ, ಅದರಂತೆ ಈ ಭಾರಿ ಪ್ರಪಂಚದ ಅಪಾರ ಭಕ್ತರನ್ನು ಸೆಳೆಯುವ ಮಹಾಕುಂಭ ಮೇಳ ತನ್ನದೆ ಆದ ಹಿರಿಮೆ ಹೊಂದಿದೆ, ಶುದ್ದತೆ ಮತ್ತು ಏಕತೆಯ ಸಂಕೇತ ಸೂಚಿಸುವ ಕುಂಭ ಮೇಳೆ ಈ ಬಾರಿ ಮಕರ ಸಂಕ್ರಾಂತಿ ಹಬ್ಬದಂತೆ ರಂಗೋಲಿ ಬಿಡಿಸಿರುವುದು ಸಂತೋಷ ತಂದಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಕುಟುಂಬದ ಸಹಕಾರದೊಂದಿಗೆ ಮೂಡಿ ಬಂದ ರಂಗೋಲಿಗೆ ಮಲ್ಲೇಶ್ವರ, ಶಿವಲೀಲಾ,
,ವೇದಾ, ಪ್ರಶಾಂತ, ಮಕ್ಕಳ ಸಹಕಾರ ದಿಂದ ಮೂಡಿ ಬಂದಿದೆ ಎನ್ನಲಾಗಿದೆ.

About The Author

Namma Challakere Local News
error: Content is protected !!