ಚಳ್ಳಕೆರೆ :
ಉಪನೋಂದಾವಣೆ ಕಚೇರಿಯ ಆವರಣದಲ್ಲಿ ಆತ್ಮಹತ್ಯೆ ಗೆ ಮುಂದಾದ
ಬಡ ಕುಟುಂಬ
ಹೌದು ಚಳ್ಳಕೆರೆ ನಗರದ
ಬಡ ಕುಟುಂಬವೊಂದು ಜಮೀನು ನೊಂದಾವಣೆ ಮಾಡಿಸಲು ಚಳ್ಳಕೆರೆ ನಗರದ ಉಪ ನೊಂದಾವಣೆ ಕಛೇರಿಗೆ ಆಗಮಿಸಿದಾಗ ಉಪ ನೊಂದಾವಣೆಯ ಅಧಿಕಾರಿಗಳು ಸಮಯ ನಿಗಧಿ ಮಾಡಿ ಮುಂಜಾನೆ ಯಿಂದ ಸಂಜೆ ವರೆಗೆ ಕಾಯಿಸಿ ನಂತರ ನಿಮ್ಮ ಜಮೀನು ನೊಂದಾವಣೆ ಮಾಡಲು ಬರುವುದಿಲ್ಲ, ರದ್ದಾಗಿದೆ ಎಂದು ಹೇಳಿದಾಗ ಆಕ್ರೋಶ ಗೊಂಡ ಕುಟುಂಬದ ಸದಸ್ಯರು ಕಛೇರಿ ಆವರಣದಲ್ಲಿ ಹೈಡ್ರಾಮ ನಡೆಸಿದ್ದಾರೆ.
ಇನ್ನೂ ಚಳ್ಳಕೆರೆ ತಾಲೂಕಿನ ವೃಂದವನಹಳ್ಳಿ ಗ್ರಾಮದ ಕುಟುಂಬ
ಮುಂಜಾನೆ ಯಿಂದ ಸಂಜೆಯವರೆ ಕಾಯಿಸಿ ಸಂಜೆ ವೇಳೆ ಈ ನಿರ್ಧರಕ್ಕೆ ಕಾರಣವೇನು, ಎಂಬುದು ಗೊತ್ತಿಲ್ಲ, ಆದರೆ ನೊಂದ ಕುಟುಂಬ ಆರೋಪ ಮಾತ್ರ ರಾಜಕೀಯ ಹಿತಾಸಕ್ತಿಗಳಿಂದ ನಮ್ಮ ಜಮೀನು ನೊಂದಾವಣೆ ಮಾಡಿಸದೆ, ಅಧಿಕಾರಿಗಳು ಸಬೂಬು ಹೇಳುತ್ತಾರೆ ಆದರೆ ಕೊನೆಯಲ್ಲಿ ಅಧಿಕಾರಿಗಳು ಜಮೀನು ನೊಂದಾವಣೆ ಮಾಡಿದ್ದಾರೆ ಎನ್ನಲಾಗಿದೆ.

