ಚಳ್ಳಕೆರೆ : ಮೊಳಕಾಲ್ಕೂರು: ಮಳೆಗಾಗಿ ಕತ್ತೆಗಳ ಮದುವೆ
ಮಾಡಿದ ಗ್ರಾಮಸ್ಥರು
ಮೊಳಕಾಲ್ಕೂರು ಕ್ಷೇತ್ರದ ಅಬ್ಬೇನಹಳ್ಳಿಯಲ್ಲಿ ಮಳೆ ಬಾರದೆ
ಬೆಳೆಗಳು ಬಾಡುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಇಂದು ವಿಶಿಷ್ಟ
ಪೂಜೆಯೊಂದನ್ನು ನಡೆಸಿದ್ದಾರೆ. ನೇರ್ಲಹಳ್ಳಿಯಿಂದ ತರಿಸಿದ
ಕತ್ತೆಗಳಿಗೆ ಚಿನ್ನಹಗರಿ ಹಳ್ಳದಲ್ಲಿ ಸ್ನಾನ ಮಾಡಿಸಿ, ಶಾಸ್ರೋಕ್ತವಾಗಿ
ಗಂಗಾ ಪೂಜೆ ನೆರವೇರಿಸಿದರು.
ನಂತರ ಅವುಗಳಿಗೆ ಅರಿಶಿನ ನೀರು
ಹಾಕಿ, ಬಾಸಿಂಗ ಧಾರಣೆ ಮಾಡಿಸಿ, ಈಶ್ವರ ದೇಗುಲದಲ್ಲಿ ಪೂಜಿಸಿ,
ಆರತಿ ಮಾಡಿ ಗ್ರಾಮದಲ್ಲಿ ಮೆರವಣಿಗೆ ನಡೆಸುವ ಮೂಲಕ
ವರುಣನ ಕೃಪೆಗೆ ಪ್ರಾರ್ಥಿಸಿದರು.

