ಚಳ್ಳಕೆರೆ :
ಚಿತ್ರದುರ್ಗ: ಈರುಳ್ಳಿ ಬೆಳೆ ಮೇಲೆ ಬೇಸಾಯ ಮಾಡಿದ
ರೈತ
ಶುಕ್ರವಾರ ಸಜ್ಜನಕೆರೆಯಲ್ಲಿ, ಈರುಳ್ಳಿ ಬೆಳೆಯ ಬೆಲೆ ಕುಸಿತ
ಮತ್ತು ಹೆಚ್ಚಿನ ಮಳೆಯಿಂದಾಗಿ ಬೆಳೆ ಹಾಳಾದ ಪರಿಣಾಮ,
ಗೌಡ್ರ ಬಸವರಾಜಪ್ಪ ಎಂಬ ರೈತ ತನ್ನ ಎರಡು ಲಕ್ಷ
ರೂಪಾಯಿ ಖರ್ಚು ಮಾಡಿ, ಮೂರು ಎಕರೆಯಲ್ಲಿ ಬೆಳೆದಿದ್ದ
ಈರುಳ್ಳಿ ಬೆಳೆಯ ಮೇಲೆಯೇ ಬೇಸಾಯ ಮಾಡಿದ ಘಟನೆ
ನಡೆದಿದೆ. ಬೆಳೆ ಕೈಗೆ ಬಂದರೂ ಬೆಲೆ ಸಿಗದೆ, ಶೀತದಿಂದಾಗಿ
ಮತ್ತಷ್ಟು ನಷ್ಟವಾಗಿರುವುದರಿಂದ ರೈತ ಬೇಸತ್ತು ಈ ನಿರ್ಧಾರ
ಕೈಗೊಂಡಿದ್ದಾನೆ.

