“ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಭಜನೆ”
ಚಳ್ಳಕೆರೆ:-ಆಧ್ಯಾತ್ಮಿಕ ನಗರಿ ಚಳ್ಳಕೆರೆಯ ಶಿವನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಪ್ರತಿಷ್ಟಾಪನ ಮಹೋತ್ಸವದ ಅಂಗವಾಗಿ ನಗರದ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಈ ಭಜನಾ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ನಾಗರತ್ನಮ್ಮ,ಕಾವೇರಿ, ವನಜಾಕ್ಷಿ ಮೋಹನ್, ಮಾಣಿಕ್ಯ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ, ಗೀತಾ ನಾಗರಾಜ್,ಶೈಲಜ, ಕೃಷ್ಣವೇಣಿ, ಉಷಾ ಶ್ರೀನಿವಾಸ್,ಸುಮನ ಕೋಟೇಶ್ವರ್, ಯಶೋಧಾ ಪ್ರಕಾಶ್ , ಪ್ರೇಮಲೀಲಾ,ಕೆ.ಎಸ್ ವೀಣಾ,ವೈಷ್ಣವಿ, ವೀಣಾ ಮಂಜುನಾಥ, ಹಣ್ಣಿನ ವ್ಯಾಪಾರಿ ವೆಂಕಟೇಶ್,ಅಶ್ವಿನಿ, ರಶ್ಮಿ ರಮೇಶ್, ಮಾನ್ಯ, ವಿಶಾಲಾಕ್ಷಿ ಪುಟ್ಟಣ್ಣ,ಗಿರಿಜಾಮ್ಮ, ಜಯಮ್ಮ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

