ಚಳ್ಳಕೆರೆ :

ಕಳೆದ ಒಂದು ವಾರದಿಂದ ಪೊಲೀಸರ ನಿದ್ದೆಗೆಡಿಸಿದ ಕಳ್ಳರು ತಮ ಕೈಚಳಕ ತೋರಿಸಿದ್ದಾರೆ.

ನಗರದಲ್ಲಿ ಸಿಸಿ ಕ್ಯಾಮರಾ, ಬ್ಯಾಂಕ್ ಎಟಿಎಂ ಗಳ ರಕ್ಷಣಾ ಸಿಬ್ಬಂದಿ ಇಲ್ಲದೆ ಇರುವುದು, ಅಸ್ತ್ರವನ್ನಾಗಿ ಮಾಡಿಕೊಂಡ ಕಳ್ಳರು, ಪ್ರತಿನಿತ್ಯವೂ ನಗರದಲ್ಲಿ ಕಳ್ಳತನ ಮಾಡುತ್ತಿದ್ದಾರೆ.

ಆಂದ್ರಪ್ರದೇಶದ ಗಡಿ ಭಾಗವನ್ನು ಹಂಚಿಕೊಂಡ ಚಳ್ಳಕೆರೆ ತಾಲ್ಲೂಕು ವಿಶಾಲವಾಗಿ ಹಬ್ಬಿದೆ, ಅದರಂತೆ ನಗರದಲ್ಲಿ ಕೆಲವು ಖಾಸಗಿ ಮಳಿಗೆಗಳಿಗೆ ಬಿಟ್ಟರೆ ಎಲ್ಲಿಯೂ ಕೂಡ ಒಂದು ಸಿಸಿ ಕ್ಯಾಮೆರಾ ಹಾಗೂ ರಕ್ಷಣೆ ಇಲ್ಲದಿರುವುದು ಅಸ್ತ್ರವನ್ನಾಗಿ ಮಾಡಿಕೊಂಡ ಕಳ್ಳರು, ಇಂದು ಬೈಕ್ ನಲ್ಲಿದ್ದ 1.70 ಲಕ್ಷ
ಕಳವಾದ ಘಟನೆ ಬ್ಯಾಂಕ್ ಗ್ರಾಹಕರಲ್ಲಿ ಭೀತಿಯನ್ನುಂಟು
ಮಾಡಿದೆ.

ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಕೆನರಾ
ಬ್ಯಾಂಕ್ ಮುಂಭಾಗ ತಾಲೂಕಿನ ಕುರುಡಿಹಳ್ಳಿ ಗ್ರಾಮದ
ತಿಪ್ಪೇಸ್ವಾಮಿ ಎಂಬವರು ಬೆಳಗ್ಗೆ .10.20ರ ಸಮಯದಲ್ಲಿ
ತನ್ನ ಬೈಕ್ ನ ಸೈಡ್ ಬ್ಯಾಗ್ ನಲ್ಲಿಟ್ಟು ಬ್ಯಾಂಕ್ ಒಳಗೆ
ಹೋಗಿ ಬರುವಷ್ಟರಲ್ಲಿ ಬ್ಯಾಗ್ ನಲ್ಲಿದ್ದ ಹಣ
ಕಳವಾಗಿರುವುದು ಕಂಡು ಬಂದಿದೆ.

ಕರ್ನಾಟಕ ಬ್ಯಾಂಕ್ ಮುಂಬಾಗ ಬ್ಯಾಂಕ್ ನಿಂದ ಹಣ ಬಿಡಿಸಿಕೊಂಡು
ಸ್ಕೂಟಿಯಲ್ಲಿಟ್ಟಿದ್ದ.1.40 ಕದ್ದು ನಾಲ್ಕು ದಿನಗಳು
ಕಳೆಳೆಯುವ ಮುನ್ನವೇ ಮತ್ತೆ ಈ ಘಟನೆ ‌ಜರುಗಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಇನ್ನೂ
ತಕ್ಷಣ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ
ಬಂದ ಪೋಲಿಸ್ ಅಧಿಕಾರಿಗಳು ಕೆನರಾ ಬ್ಯಾಂಕ್
ನಲ್ಲಿರುವ ಸಿ.ಸಿ.ಕ್ಯಾಮರ ಪರಿಶೀಲನೆ ಮಾಡಿಲು
ಮುಂದಾಗಿದ್ದು ತನಿಖೆ ನಂತರ ಹೆಚ್ಚಿನ ಮಾಹಿತಿ
ಲಭ್ಯವಾಗಲಿದೆ.

ಒಟ್ಟಾರ ಬ್ಯಾಂಕ್ ಗಳ ಮುಂದಿನ ಅಕ್ರಮ ಹೋಟೆಲ್,
ನಗರದ ಪ್ರಮುಖ ಸ್ಥಳಗಲ್ಲಿ ಸಿ.ಸಿ.ಕ್ಯಾಮರಗಳಿಲ್ಲದೆ
ಇರುವುದೇ ಕಳ್ಳರಿಗೆ ವರದಾನವಾಗಿದ್ದು ಈಗಲಾದರೂ
ಸಂಬಂಧಪಟ್ಟ ಅಧಿಕಾರಿಗಳು ನಗರದಲ್ಲಿ ಸಿ.ಸಿ.ಕ್ಯಾಮರ
ಅಳವಡಿಸಿವರೇ ಕಾದು ನೋಡ ಬೇಕಾಗಿದೆ.

ಸ್ಥಳಕ್ಕೆ ಡಿವೈಎಸ್ ಪಿ ಬಿಟಿ.ರಾಜಣ್ಣ ಹಾಗೂ ಸಿಬ್ಬಂದಿ ಬೇಟಿ‌ನೀಡಿ ಸ್ಥಳ ತನಿಖೆ ನಡೆಸುತಿದ್ದಾರೆ.

About The Author

Namma Challakere Local News
error: Content is protected !!