ಚಳ್ಳಕೆರೆ :
ಚಿತ್ರದುರ್ಗ: ರಾತ್ರೋ ರಾತ್ರಿ 1 ಕೋಟಿ ಕಳಪೆ ಹೈಮಾಸ್ಟ
ದೀಪ ಅಳವಡಿಕೆ
ಚಿತ್ರದುರ್ಗದ ಇಂಗಲಾದಾಳ್ ಗ್ರಾಮದಲ್ಲಿ ರಾತ್ರೋರಾತ್ರಿ1ಕೋಟಿ
ವೆಚ್ಚದ ಹೈಮಾಸ್ ದೀಪ ಅಳವಡಿಸಿ, ಕಾಮಗಾರಿಯನ್ನ
ಮುಗಿಸಿದ್ದಾರೆ.
ಯಾವ ಇಲಾಖೆಯಿಂದ ಕಾಮಗಾರಿಗೆ ಅನುಮತಿ
ಪಡೆಯದೆ ಅನಧಿಕೃತ ಸ್ಥಳಗಳಲ್ಲಿ ದೀಪಗಳ ಅಳವಡಿಸಿದ್ದಾರೆ.
ಸ್ಪಾಟ್ ಮಾರ್ಕಿಂಗ್ ಇಲ್ಲ. ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಈ
ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಗುಣಮಟ್ಟವಿಲ್ಲದ
ಕಂಬಗಳು, ಕಳಪೆ ಕಾಂಕ್ರೀಟ್ ಕೆಲಸಗಳಿಗೆ ಗ್ರಾಮಸ್ಥರು ಆಕ್ರೋಶ
ವ್ಯಕ್ತಪಡಿಸಿದ್ದಾರೆ. ಅಕ್ರಮವೆಸಗಿದವರ ವಿರುದ್ಧ ಕ್ರಮಕ್ಕೆ
ಗ್ರಾಮಸ್ಥರು ಆಗ್ರಹಿಸಿದ್ದಾರೆ.

