ಚಳ್ಳಕೆರೆ :
ಮೊಳಕಾಲ್ಕೂರು: ಶಾರ್ಟ್ ಸರ್ಕ್ಯೂಟ್ ನಿಂದ ಬಣವೆ
ಸುಟ್ಟು ಭಸ್ಮ
ವಿದ್ಯುತ್ ಸರಬರಾಜು ತಂತಿಗಳಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್
ನಿಂದಾಗಿ, ಉಲ್ಲಿನ ಬಣವೆಯೊಂದು ಸಂಪೂರ್ಣವಾಗಿ ಸುಟ್ಟು
ಭಸ್ಮವಾದ ಘಟನೆ ಮೊಳಕಾಲ್ಕೂರಿನ ಹಾನಗಲ್ ಮುಖ್ಯ
ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿಂದು
ನಡೆದಿದೆ.
ಹನುಮಂತಪ್ಪ ಅವರಿಗೆ ಈ ಬಣವೆ ಸೇರಿದ್ದು, ಅಂದಾಜು
20, 000ಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ. ಸ್ಥಳೀಯ
ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಆಗಮಿಸಿ ಬೆಂಕಿ
ನಂದಿಸಿದರು.

