ಆರೋಗ್ಯವಂತ ಸಮಾಜಕ್ಕೆ ಉಚಿತ ಆಯುರ್ವೇದಿಕ್ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ ಸಹಕಾರಿ ಎಚ್ ಎಂ. ನಾಗರಾಜ್.

ನಾಯಕನಹಟ್ಟಿ-ಫೆ.12. ಗ್ರಾಮೀಣ ಪ್ರದೇಶದ ಬಡ ಜನರು ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಸಂಘ ಮಿತ್ರ ಗ್ರಾಮೀಣ ಸಂಸ್ಥೆ ದಾವಣಗೆರೆ ಪ್ರಾದೇಶಿಕ ವ್ಯವಸ್ಥಾಪಕ ಹೆಚ್ ಎಂ ನಾಗರಾಜ್ ಸಲಹೆ ನೀಡಿದರು.

ಗುರುವಾರ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೀಮಗೊಂಡನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ (ರಿ) ಚಿತ್ರದುರ್ಗ ಘಟಕ ಬಾಪೂಜಿ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಚಳ್ಳಕೆರೆ ಹಾಗೂ ಸಂಗಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆ ಚಳ್ಳಕೆರೆ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರ ನಾಯಕನಹಟ್ಟಿ ಇವರ ಸಹಯೋಗದೊಂದಿಗೆ ಉಚಿತ ಆಯುರ್ವೇದಿಕ್ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು ಹೊಲ ಮನೆಗಳಲ್ಲಿ ದೈಹಿಕ ಶ್ರಮ ಹಾಕಿ ಕೆಲಸ ಮಾಡುವ ರೈತರು ಹಾಗೂ ಹಳ್ಳಿಗಾಡಿನ ಜನರಲ್ಲೂ ಅನಾರೋಗ್ಯ ಬಾಧಿಸುತ್ತದೆ ಆಧುನಿಕ ಜೀವನ ಶೈಲಿ ಹಾಗೂ ಒತ್ತಡ ಬದುಕಿನಿಂದಾಗಿ ಈಗಾಗುತ್ತದೆ ಆರೋಗ್ಯದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿದಾಗ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಅಬ್ಬೇನಹಳ್ಳಿ ಆಯುರ್ವೇದಿಕ್ ವೈದ್ಯಾಧಿಕಾರಿ ಬೊಮ್ಮಣ್ಣ ಎಸ್ ಬಾಬು ಮಾತನಾಡಿದರು. ಪ್ರತಿಯೊಬ್ಬರಿಗೂ ಜೀವನದಲ್ಲಿ ಆರೋಗ್ಯ ಮುಖ್ಯ ಆಯುರ್ವೇದಿಕ್ ವೈದ್ಯರಾಗಿ ನಿಮ್ಮ ಮನೆಯ ಬಾಗಿಲಿಗೆ ಬಂದು ಚಿಕಿತ್ಸೆ ನೀಡುವುದು ನಮ್ಮ ಸೌಭಾಗ್ಯ ಗ್ರಾಮೀಣ ಪ್ರದೇಶದ ಬಡ ಜನರು ಇಂತಹ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಮಾಜಿ ತಾಲೂಕು ಪಂಚಾಯತಿ ಸದಸ್ಯ ಎಸ್ ತಿಪ್ಪೇಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ರಂಗಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಣ್ಣ, ಜಿ.ಓ.ಓಬಳೇಶ್, ಊರಿನ ಮುಖಂಡರಾದ ಬಸವರಾಜ್, ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಆಡಳಿತ ವೈದ್ಯ ಅಧಿಕಾರಿ ಡಾ. ಅರುಣ್, ಡಾ. ಗುರುಭಗವತಿ, ಡಾ. ಕಲ್ಯಾಣಿ, ಸಂಘ ಮಿತ್ರ ಮುಖ್ಯ ವ್ಯವಸ್ಥಾಪಕ ಎಂ. ರಮೇಶ್, ವಲಯ ವ್ಯವಸ್ಥಾಪಕ ಕೆ. ಎಂ. ಸುನಿಲ್ ಕುಮಾರ್, ಮೈರಾಡ ಶ್ರೀಮತಿ ಲಕ್ಷ್ಮಿ, ವಿಜಯಮ್ಮ, ಮಹಾಂತೇಶ್, ಭೋಜರಾಜ್, ಸೇರಿದಂತೆ ರೋಗಿಗಳು ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!