ಕಡೆ ಶ್ರಾವಣ ಶನಿವಾರ ರೇಖಲಗೆರೆ ಶ್ರೀ ಕಾವಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ.
ನಾಯಕನಹಟ್ಟಿ: ಗುಂತಕೋಲ್ಮನಹಳ್ಳಿ ಸಮೀಪದ ರೇಖಲಗೆರೆ ಶ್ರೀ ಕಾವಲು ಆಂಜನೇಯ ಸ್ವಾಮಿ ದೇವರ ದರ್ಶನ ಪಡೆದ ಭಕ್ತರು ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಶನಿವಾರ ಶ್ರಾವಣ ಮಾಸದ ಅಂಗವಾಗಿ ಭಕ್ತರು ದೇವರ ದರ್ಶನ ಪಡೆದರು.
•
ರೇಖಲಗೆರೆ ಶ್ರೀ ಕಾವಲು ಆಂಜನೇಯ ಸ್ವಾಮಿ ಕಡೇ ಶ್ರಾವಣ ಶನಿವಾರ ದಿನದಂದೂ ರೇಖಲಗೆರೆ ಶ್ರೀ ಕಾವಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹರಿದು ಬಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಶ್ರಾವಣ ಮಾಸ ಪ್ರಯುಕ್ತ ಬೆಳಿಗ್ಗೆ ೯ ಗಂಟೆಯಿಂದಲೇ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜಾಕೈಂಕರ್ಯಗಳು ಆರ೦ಭಗೊ೦ಡಿದ್ದವು. ವಿವಿಧ ಊರುಗಳಿಂದ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಸುಮಾರು ಐನೂರುಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ ಎಂದು ಕೋಲಮ್ಮನಹಳ್ಳಿ ಪೀತಾಂಬರ್ ಹೇಳಿದರು. ನಂತರ ಮಾಧ್ಯಮದೊಂದಿಗೆ ಮಾತಾನಾಡಿದವರು 2025ನೇ ಸಾಲಿನಲ್ಲಿ 5 ಶನಿವಾರ ಬಂದಿದ್ದವೂ ಹಿಂದೆ ನಾಲ್ಕು ಶನಿವಾರ ಪೂರ್ಣಗೊಂಡಿದ್ದು ಈ ವಾರ ರೇಖಲಗೆರೆ ಲಂಬಾಣಿಹಟ್ಟಿ ಸದ್ದಭಕ್ತರು ಸೇರಿ ಇವತ್ತಿನ ವಿಶೇಷ ಪೂಜೆ ಅಲಂಕಾರ ಮತ್ತು ಅನ್ನ ಸಂತಾರ್ಪಣೆಯನ್ನು ಏರ್ಪಡುಸಿರುತ್ತಾರೆ, ಹಾಗೂ ಕೆ ಬೋರಯ್ಯ ಮತ್ತು ಮಕ್ಕಳು ಹಾಗೇ ದಾಳಿಂಬ್ರೆ ಮಂಜಣ್ಣನವರು ಶ್ರೀ ಆಂಜನೇಯ ಸ್ವಾಮಿಗೆ ಬೆಳ್ಳಿಯ ಕವಚ ಕೂಡುಗೆ ನೀಡಿದ್ದಾರೆ ದೇವರು ಅವರಿಗೆ ಐಶ್ವರ್ಯ, ಆರೋಗ್ಯ ಸಂಪತ್ತು ಕೊಟ್ಟು ಕಾಪಾಡಲಿ ಈ ಭಾಗದ ರೈತರಿಗೆ ಉತ್ತಮವಾಗಿ ಮಳೆ ಬೆಳೆ ಆಗಲಿ ಎಂದರು.
ಇದೇ ವೇಳೆ ದೀನಾ ಭಗತ್ ಗುರೂಜಿ ಮಾತಾನಾಡಿದರು ಪರಮ ಪವಿತ್ರವಾದ ಈ ಕ್ಷೇತ್ರದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ನಾಐಕನಹಟ್ಟಿ ಹೋಬಳಿಯ ವಿವಿಧ ಹಳ್ಳಿಗಳಿಂದ ಪ್ರತಿದಿನ ದೇವಸ್ಥಾನಕ್ಕೆ ಬೇಟಿ ಕಷ್ಟಗಳ ಬಗೆಹರಿಸಿಕೊಳ್ಳಲೂ ಶ್ರೀ ಆಂಜನೇಯ ಸ್ವಾಮಿ ದರ್ಶನ ಪಡೆಯುತ್ತಾರೆ, ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಶನಿವಾರ ರೇಖಲಗೆರೆ ಹಾಗೂ ಲಂಬಾಣಿಹಟ್ಟಿ ಗ್ರಾಮಸ್ಥರು ಶ್ರೀ ಆಂಜನೇಯಸ್ವಾಮಿ ವಿಶೇಷ ಪೂಜೆ ಅಲಂಕಾರ ಅನ್ನಸಂತಾರ್ಪಣೆ ನೀಡುತ್ತಾರೆ ಎಂದರು.
ಇದೇ ವೇಳೆ ಶ್ರೀ ಕಾವಲು ಆಂಜನೇಯ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಮಾತಾನಾಡಿ ಶ್ರೀ ಆಂಜನೇಯ ಸ್ವಾಮಿ ಕೃಪೆಯಿಂದ ಉತ್ತಮ ಮಳೆ ಬೆಳೆ ಆಗಲಿ ಎಂದು ಹಾರೈಸಿದರು.
ಇನ್ನೂ ಇದೇ ವೇಳೆ ಓಬಯ್ಯನಹಟ್ಟಿ ಗ್ರಾಮದ ಮುಖಂಡ ಕಾಕಸೂರಯ್ಯ, ರೇಖಲಗೆರೆ ಶಿಕ್ಷಕ ಅರುಣ್ ಕುಮಾರ್ ಮಾತಾನಾಡಿದರು.
ಈ ಸಂಧರ್ಭದಲ್ಲಿ ಶ್ರೀ ಕಾವಲು ಆಂಜನೇಯ ಸ್ವಾಮಿ ಸೇವಾ ಸಮಿತಿ ಗೌರವಧ್ಯಕ್ಷ ಎಂ ಚಿನ್ನಯ್ಯ ರೇಖಲಗೆರೆ, ಎ ಟಿ ಆಶೋಕ್, ಪ್ರೋ|| ತಿಪ್ಪೇಸ್ವಾಮಿ, ಗುಂತಕೋಲಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ, ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಿರೇಶ್, ಎಸ್ ಎನ್ ತಿಪ್ಪೇಸ್ವಾಮಿ, ಪುರಾಹಿತ ಮುರುಳಿ ಕೃಷ್ಣ, ಪೂಜಾರಿ ನಾಗೇಶ ಸೇರಿದಂತೆ ನೂರಾರು ಭಕ್ತು ಇದ್ದರು.

