ಚಳ್ಳಕೆರೆ : ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ಶೌಚಾಲಯ ಸ್ಥಳಕ್ಕೆ ಬಿಜೆಪಿ ಮುಖಂಡ ಕೆ.ಟಿ.ಕುಮಾರಸ್ವಾಮಿ ಭೇಟಿ ನೀಡಿ ಹೈಟೆಕ್ ಶೌಚಾಲಯ ನಿರ್ಮಾಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾತನಾಡಿದ ಅವರು ನಗರದಲ್ಲಿ ಈಗಾಗಲೇ ಸಾಕಷ್ಟು ಕಡೆ ಶೌಚಾಲಯ ನಿರ್ಮಾಣಕ್ಕೆ ಜಾಗವಿದ್ದರೂ ದಾನಿಗಳು ನೀಡಿದಂತಹ ಜಾಗದಲ್ಲಿ ಹೈಟೆಕ್ ಶೌಚಾಲಯ ಮಾಡಲು ಹೊರಟಿದ್ದು ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದ್ದು ಇವರನ್ನ ಒಕ್ಕಲೆಬಿಸುವ ಕೆಲಸವಾಗುತ್ತಿದೆ.

ಈಗಾಗಲೇ ಇಲ್ಲಿ ಇವರಿಗೆ ಇಲ್ಲದಂತಾಗಿ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ .ಇಲ್ಲಿ ನಿರ್ಮಾಣವಾಗುತ್ತಿರುವ ಹೈಟಿಕ್ ಶೌಚಾಲಯವನ್ನು ಸ್ಥಳಾಂತರ ಮಾಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಇವರ ಜೊತೆಗೂಡಿ ನಾವು ಸಹ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

About The Author

Namma Challakere Local News
error: Content is protected !!