ಚಳ್ಳಕೆರೆ :
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಉಪ ಕಾರ್ಯದರ್ಶಿರವರು ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾ.ಪಂಗೆ ಭೇಟಿ ನೀಡಿ ಗ್ರಾಮಪಂಚಾಯಿತಿ ಸದಸ್ಯರೊಂದಿಗೆ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು.

ಮುಂದುವರೆದು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ದೀರ್ಘವಾಗಿ ಚರ್ಚೆ ನಡೆಸಿದರು.

ಯೋಜನೆಗಳು ಸಾರ್ವಜನಿಕರಿಗೆ ತಲುಪಬೇಕು ಹಾಗೂ ತಲುಪಿದ ನಂತರ ಅವರೊಂದಿಗೆ ಸದುಪಯೋಗವಾದ ಬಗ್ಗೆ ನೇರ ಚರ್ಚೆ ನಡೆಸೋಣ ಎಂಬುದಾಗಿ ತಿಳಿಸಿದರು.

ನಂತರ ಗ್ರಾಮ ಪಂಚಾಯತಿ ಸಿಬ್ಬಂದಿಗಳೊಂದಿಗೆ ಯೋಜನೆಗಳು ವಿಳಂಬವಾಗದಂತೆ ಹಾಗೂ ಎಲ್ಲಾ ದಾಖಲಾತಿ ಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತೆ ಸೂಚಿಸಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಉಪ ಕಾರ್ಯದರ್ಶಿರವರು ನರೇಗಾ ಯೋಜನೆಯಡಿ ಅನುಷ್ಠಾನಗೊಂಡ NRLM ಶೆಡ್ ಹಾಗೂ ಗ್ರಾಮಪಂಚಾಯಿತಿ ಕಟ್ಟಡ ಪರಿಶೀಲನೆ ‌ನಡೆಸಿದರು.

ಈ ಸಮಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ,ಜಿಲ್ಲಾ ಪಂಚಾಯತ್ ಯಿಂದ ಅಗಮಿಸಿದಂತಾ ಎ ಡಿ.ಪಿ.ಸಿ ರವರು ತಾಲ್ಲೂಕಿನ ತಾಂತ್ರಿಕ ಸಂಯೋಜಕರು ಗಳು (ಸಿವಿಲ್ ಹಾಗೂ ಅನುಷ್ಠಾನ ಇಲಾಖೆ) ಗ್ರಾಮಪಂಚಾಯಿತಿ ತಾಂತ್ರಿಕ ಸಹಾಯಕರು,ಭಿ.ಎಫ್.ಟಿ,ಜಿ.ಕೆ.ಎಂ,ಕರವಸೂಲಿಕಾರರು,ಗಣಕಯಂತ್ರ ನಿರ್ವಾಹಕರು ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿಯವರು ಹಾಗೂ ಸದಸ್ಯರು ಹಾಜರಿದ್ದರು.

About The Author

Namma Challakere Local News
error: Content is protected !!