ಕೆ ಎಸ್ ಆರ್ ಟಿಸಿ ಚಾಲಕ ನೇಣು ಬೀಗಿದುಕೊಂಡ ಸ್ಥಿತಿಯಲ್ಲಿ..ಶವ ಪತ್ತೆ

ಚಳ್ಳಕೆರೆ ನಗರದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮನ್ನೆಕೋಟೆ ಗ್ರಾಮದ
ಪರಮೇಶ್ವರಪ್ಪ ಎನ್ನುವ (36 ) ಬಸ್ ಚಾಲಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ನಗರದ ಪಾವಗಡ ರಸ್ತೆಯ ಸಮೀಪ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ….ಸುಮಾರು ನಾಲ್ಕು ದಿನದಿಂದ ಕರ್ತವ್ಯಕ್ಕೆ ಗೈರಾಗಿದ್ದು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ….

ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಕೆ. ಕುಮಾರ್. ಹಾಗೂ ಪಿಎಸ್ಐ ಧರಪ್ಪ, ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…

ಇನ್ನು ತನಿಖೆಯ ನಂತರವೇ ಆತ್ಮಹತ್ಯೆಗೆ ನಿಖರವಾದ ಮಾಹಿತಿ ಸಿಗಲಿದೆ…

ಸಂದರ್ಭದಲ್ಲಿ ಚಾಲಕನ ಕುಟುಂಬಸ್ಥರ ಗೋಳಾಟ ಏಳು ತೀರದಾಗಿತ್ತು……

About The Author

Namma Challakere Local News
error: Content is protected !!