ಎನ್ ಮಹದೇವಪುರದಲ್ಲಿ ಮೊಹರಂ ಹಬ್ಬ ಸಂಭ್ರಮ.

ನಾಯಕನಹಟ್ಟಿ:: ಹಿಂದೂ ಮುಸ್ಲಿಂ ಧರ್ಮಗಳ ಭಾವೈಕ್ಯ ಕ್ಕೆ ಸಾಕ್ಷಿಯಾಗಿರುವ ಮೊಹರಂ ಹಬ್ಬವು ಎನ್ ಮಹದೇವಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭ್ರಮದಿಂದ ನಡೆಯಿತು.

ಪ್ರತಿ ವರ್ಷವೂ ಮೊಹರಂ ಹಬ್ಬದ ಪೂರ್ವಭಾವಿಯಾಗಿ ಪೀರಲು ದೇವರ ಗುಡಿಯ ಮುಂದೆ ಅಗ್ನಿಕುಂಡದ ಗುಂಡಿಯನ್ನು ತೆಗಿಯಲು ಗುದ್ದಲಿ ಹಾಕಲಾಗುತ್ತದೆ. ನಂತರ ದೇವರ ಪಂಜಾಗಳನ್ನು ಗುಡಿಯಲ್ಲಿ ಪ್ರತಿಷ್ಠಾಪಿಸಿ ನಿತ್ಯ ಪೂಜಾ ಕೈಂಕರ್ಯಗಳು ನಡೆಸಲಾಗುತ್ತದೆ.

ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಪ್ರತಿ ವರ್ಷ ಗ್ರಾಮದಲ್ಲಿ ಆಚರಣೆ ಮಾಡುವುದು ವಾಡಿಗೆಯಾಗಿದೆ.
ಸುಮಾರು ಹತ್ತು ದಿನಗಳ ಕಾಲ ನಡೆಯುವ ಈ ಒಂದು ಮೊಹರಂ ಹಬ್ಬವನ್ನು ಗ್ರಾಮದ ಪ್ರತಿ ಬೀದಿಗಳಲ್ಲಿ ದೇವಸ್ಥಾನ ಸೇರಿದಂತೆ ದೀಪಾಲಂಕಾರ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ ಇನ್ನೂ ಎನ್ ಮಹದೇವಪುರ ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಸೇರಿ ಸಂಭ್ರಮ ಸಡಗರದಿಂದ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಇದೆ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ವಿಭಾಗ ರಾಜ್ಯಾಧ್ಯಕ್ಷ ಎಂ. ವಿಜಯ ನಾಯಕ ಮಾತನಾಡಿದರು ಎನ್ ಮಹದೇವಪುರ ನನ್ನ ಕರ್ಮಭೂಮಿ ಪ್ರತಿ ವರ್ಷ ಮೊಹರಂ ಹಬ್ಬದಲ್ಲಿ ಪೀರಲು ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ಗ್ರಾಮದಲ್ಲಿ ಉತ್ತಮ ಮಳೆ ಬೆಳೆ ಗ್ರಾಮದ ಜನರಿಗೆ ಉತ್ತಮ ಆರೋಗ್ಯವನ್ನ ಕಾಪಾಡಿಕೊಂಡು ಬರಲಿ ಎಂದು ಪೀರಲು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಐ ಎನ್ ಡಬ್ಲ್ಯೂ ಸಿ ಅಧ್ಯಕ್ಷ ದಿನೇಶ್, ಕಾಂಗ್ರೆಸ್ ಮುಖಂಡ ಪ್ರಸಾದ್, ಎನ್ ಮಹದೇವಪುರ ಗ್ರಾಮಸ್ಥರಾದ ಗೌಡ್ರು ಸೂರನಾಯಕ, ಬಿ. ಗುಂಡು ಬೋರಯ್ಯ, ಬಿ ಬೋರಯ್ಯ, ದಳವಾಯಿ ಬೋರಯ್ಯ, ಶ್ರೀನಿವಾಸ್ ನೀರಗಂಟೆ, ಜಿಲ್ಲಾ ಬಡಗಿ ಕೆಲಸಗಾರರ ಕ್ಷಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎ. ಜಾಕಿರ್ ಹುಸೇನ್ , ಡಿ ಟಿ ಬೋರಯ್ಯ ರೇಷ್ಮೆ ಇಲಾಖೆ ಚಳ್ಳಕೆರೆ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ.ತಿಪ್ಪೇಸ್ವಾಮಿ. ಸದಸ್ಯ ಎಂ ಓಬಳೇಶಪ್ಪ, ಎಂ. ಮಂಜಣ್ಣ, ಶಿವಣ್ಣ, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಪಿ.ಜಿ. ಗಜೇಂದ್ರ, ಬಗರ್ ಹುಕುಂ ಕಮಿಟಿ ಸದಸ್ಯ ಪಿ.ಜಿ.ಬೋರನಾಯಕ , ಮಹಬೂಬ್ ಹಾಲಿ, ಪಿಎಲ್‌ಡಿ ಬ್ಯಾಂಕ್ ಡೈರೆಕ್ಟರ್ ನಾಗರಾಜ್, ಕೆಪಿಸಿಸಿ ಪರಿಶಿಷ್ಟ ಪಂಗಡ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಸಾಗರ ಮಂಜಣ್ಣ, ನಾಯಕನಹಟ್ಟಿ ಮುನ್ನಣ್ಣ,
ಸೇರಿದಂತೆ ಸಮಸ್ತ ಎನ್ ಮದೇವಪುರದ ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!