ಅಧಿಕಾರಿಗಳಿಗೆ ಡಾ ಯೋಗೇಶ್ ಬಾಬು ಸೂಚನೆ
ಸೌಲಭ್ಯ ಕಲ್ಪಿಸುವಲ್ಲಿ ಇರಲಿ ಪ್ರಾಮಾಣಿಕತೆ.
ನಾಯಕನಹಟ್ಟಿ- ಸಮೀಪದ ತಳಕು ಸರ್ಕಾರದ ಯೋಜನೆಗಳನ್ನು ಫಲಾನುಭವಿ ಗಳಿಗೆ ತಲುಪಿಸುವಲ್ಲಿ ಗ್ರಾಪಂ ಆಡಳಿತ ಪಾಮಾಣಿಕವಾಗಿ ಕೆಲಸ ಮಾಡಬೇಕು. ಎಂದು ಕರ್ನಾಟಕ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಡಾ. ಬಿ. ಯೋಗೀಶ್ ಬಾಬು ಹೇಳಿದರು.
ಬುಧವಾರ ತಳಕು ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಯೋಜನೆ ಅಡಿ 28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಗ್ರಾ.ಪಂ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು. ತಳಕು ಗ್ರಾಪಂ ದೊಡ್ಡ ಪಂಚಾಯಿತಿಯಾಗಿದೆ. ಈ ವ್ಯಾಪ್ತಿಯಲ್ಲಿ ಎಸ್ಸಿಎಸ್ಟಿ ಸಮುದಾಯದವರು ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಫಲಾನುಭವಿಗಳಿಗೆ ವಸತಿ ಸೇರಿ ಮೂಲಸೌಕರ್ಯ ಕಲ್ಪಿಸುವಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು.
ಎಂದರು.
ಸ್ವಚ್ಛತೆ, ಬೆಳಕಿನ ವ್ಯವಸ್ಥೆ ಮತ್ತು ಕುಡಿಯುವ ನೀರಿಗೆ ನಿಗಾ ವಹಿಸಬೇಕು. ಈಗಾಗಲೇ ಪ್ರತಿ ಹಟ್ಟಿಗಳಲ್ಲೂ ಸಮುದಾಯ ಭವನ, ರಸ್ತೆ ನಿರ್ಮಾಣ ಮತ್ತು ಬಸ್ ಸೌಕರ್ಯ ಕಲ್ಪಿಸಲಾಗಿದೆ. ಆಡಳಿತ ವಿಕೇಂದ್ರಿಕರಣ ಪರಿಣಾಮಕಾರಿಯಾಗಲು ಪಂಚಾಯಿತಿ ಹಂತದಲ್ಲಿ ಪಕ್ಷಭೇದ ಮರೆತು ಹಳ್ಳಿಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು.
ಎಂದು ಕಿವಿಮಾತು ಹೇಳಿದರು.
ಗ್ರಾಮಪಂಚಾಯತಿ ಅಧ್ಯಕ್ಷೆ ಶ್ರೀಮತಿ ಟಿ .ದ್ರಾಕ್ಷಾಯಿಣಿ ಟಿ.ಎಂ. ಮಲ್ಲೇಶ್ ಕುಮಾರ್ ಮಾತನಾಡಿದರು. ಗ್ರಾಮ ಅಭಿವೃದ್ಧಿಗೆ ಸಹಕಾರ ಅಗತ್ಯ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಎಸ್ ಸಿ ಎಸ್ ಟಿ ಸಮುದಾಯದವರು ಹೆಚ್ಚು ವಾಸವಾಗಿದ್ದಾರೆ ಹೀಗಾಗಿ ಸಮುದಾಯಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸಬೇಕಾಗಿದೆ ಸಾರ್ವಜನಿಕರ ಸಮುದಾಯದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂಥ ಕೆಲಸವಾಗಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ ಗದ್ದಿಗೆ ತಿಪ್ಪೇಸ್ವಾಮಿ.
ಚಳ್ಳಕೆರೆ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಎಚ್ ಶಶಿಧರ್, ಉಪಾಧ್ಯಕ್ಷೆ ಶ್ರೀಮತಿ ಉಮಾ ಕುಮಾರ್, ತಳಕು ಗ್ರಾ.ಪಂ. ಸದಸ್ಯರಾದ ಟಿ ಕೃಷ್ಣಮೂರ್ತಿ, ಟಿ ರವಿಚಂದ್ರ, ಸಯ್ಯದ್ ಕರೀಂಸಾಬ್,ಶಮೀಮ್ ಖಾನಂ,ಕೆ.ತಿಪ್ಪೇಸ್ವಾಮಿ, ಶ್ರೀಮತಿ ನೀಲಮ್ಮ, ಎಂ ಶಾಂತಕುಮಾರ್, ಲಕ್ಷ್ಮಮ್ಮ, ಟಿ. ವಾಣಿಭಾಯಿ, ಎಂ ತಿಪ್ಪೇಸ್ವಾಮಿ, ಶ್ರೀಮತಿ ಲಕ್ಷ್ಮಿ, ಶ್ರೀಮತಿ ನೀಲಾಬಾಯಿ, ಕುಮಾರಿ ಭಾಗ್ಯಮ್ಮ, ಎಚ್ ಮಾರಯ್ಯ, ಬಿ ನಾಗರಾಜ್, ಶ್ರೀಮತಿ ಓಬಮ್ಮಕ್ಯಾಸಪ್ಪ, ಗಿರಿಜಮ್ಮ,ಬಿ. ಭಾಗ್ಯಮ್ಮ, ಪಿ.ಎಂ. ಚಂದ್ರಣ್ಣ, ಚನ್ನಯ್ಯ, ಶ್ರೀಮತಿ ಗೌರಮ್ಮ, ಪಿಡಿಒ ಬಿ ಓಬಯ್ಯ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಕೆ ನರಸಿಂಹಮೂರ್ತಿ, ತಾಂತ್ರಿಕ ಸಹಾಯಕ ಅಜಯ್ ಭವಾನಿ ರಾವ್, ಕರವಸೂಲಿಗಾರ ರಾಮಚಂದ್ರ ನಾಯ್ಕ, ಗಣಕಯಂತ್ರ ನಿರ್ವಾಹಕ ಬಿ. ಮಂಜುನಾಥ್, ವಿಷಯ ನಿರ್ವಾಹಕರು ಟಿ.ಎಸ್. ನಿಜಾಮ ಉದ್ದೀನ್, ಸೇರಿದಂತೆ ತಳಕು ಗ್ರಾಮಸ್ಥರು ಹಾಗೂ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಇದ್ದರು

