ಚಳ್ಳಕೆರೆ :
ಬಿವಿ ಸಿರಿಯಣ್ಣ ಮಾಸ್ಟರ್ ಅಭಿಮಾನಿ ಬಳಗದ ವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಿಟಿ ಶ್ರೀನಿವಾಸ್ ರವರಿಗೆ ಅಭಿನಂದಿಸಿ ಸನ್ಮಾನಿಸಿ ಬಳಗ
ಹೌದು ಚಳ್ಳಕೆರೆ ನಗರದಲ್ಲಿ ಮಾಸ್ಟ್ ಸಿರಿಯಣ್ಣನೆಂದು ಪ್ರಸಿದ್ಧ ಪಡೆದ ಬಿವಿ.ಸಿರಿಯಣ್ಣನವರ ನೆನಪು ಸದಾ ಉಳಿಯುವ ನಿಟ್ಟಿನಲ್ಲಿ ಬಿವಿ ಸಿರಿಯಣ್ಣ ಬಳಗ ಮುನ್ನೆಡೆಯುತ್ತಿದೆ.
ಅದರಂತೆ ಬಿವಿ.ಸಿರಿಯಣ್ಣನವರ ಅಗಲಿಕೆ ತಾತ್ಕಾಲಿಕ ಆದರೆ ಅವರ ಸಾಧನೆ ಚಿರಾಯುಶು, ಯಾವುದೇ ಜಾತಿ ಧರ್ಮದ ಹಿಂದೆ ಹೊಗದೆ, ಎಲ್ಲರನ್ನು ತನ್ನವರಂತೆ ಗುರು ಸ್ಥಾನ ತುಂಬಿದ ಅವರ ಮಾರ್ಗದರ್ಶನದಲ್ಲಿ ಹಿಂದಿಗೂ ಸಿರಿಯಣ್ಣ ಬಳಗ ಸಕ್ರಿಯವಾಗಿದೆ.
ಅದರಂತೆ ಮಾಸ್ಟರ್ ಸಿರಿಯಣ್ಣನವರ ಹಾದಿಯಲ್ಲಿ ಶಿಷ್ಯರ ಬಳಗದವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಿಟಿ ಶ್ರೀನಿವಾಸ್ ರವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ ಸಿರಿಯಣ್ಣ ಮಾಸ್ಟರ್ ಬಳಗ
ಚಳ್ಳಕೆರೆ ತಾಲೂಕು ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.
ಈದೇ ಸಂದರ್ಭದಲ್ಲಿ ಯಾದವ ಸಮಾಜದ ಮುಖಂಡರು ಹಾಗೂ ತಾಲೂಕು ಗೊಲ್ಲರ ಸಂಘದ ನಿರ್ದೇಶಕರಾದ ತಿಪ್ಪೇಸ್ವಾಮಿ, ನಿವೃತ್ತಿಯ ಪ್ರಾಚಾರ್ಯ ದೇವೀರಪ್ಪ, ಉದ್ಯಮಿಯಾದ ರವೀಂದ್ರ ಆಚಾರ್ , ನಿವೃತ್ತ ಕೆಇಬಿ ಅಧಿಕಾರಿಯಾದ ಚಿಕ್ಕಣ್ಣ, ಗೊಲ್ಲ ನೌಕರರ ಸಂಘದ ಗೌರವಾಧ್ಯಕ್ಷರಾದ ಪ್ರೊಫೆಸರ್ ಮಂಜುನಾಥ್ ಯಾದವ್ ಎಸ್, ನಿವೃತ್ತ ಅಧಿಕಾರಿಯಾದ ದೊಡ್ಡಿರಿ ಮಂಜಣ್ಣ, ಗೋಕುಲ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ಮ್ಯಾನೇಜರ್ ಜಿಪಿ ಶಶಿಧರ್ , ದೇವರ ಮರಿಕುಂಟೆಯ ಈರಣ್ಣ ಹೆಗ್ಗಡೆ,
ಹಾಗೂ ಸನ್ಮಾನ ಸ್ವೀಕರಿಸಿದ ಸಿಟಿ ಶ್ರೀನಿವಾಸರವರು ಮಾತನಾಡಿದರು.

