ಚಳ್ಳಕೆರೆ : ತಾಲೂಕು ನಗರoಗೆರೆ ಗ್ರಾಮದಲ್ಲಿ ಕನ್ನಡ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಈ ಕಾರ್ಯಕ್ರಮದ ಧ್ವಜಾರೋಹಣವನ್ನು ನಗರಂಗೆರೆ ಗ್ರಾಮಾಭಿವೃದ್ಧಿ ಹಾಗೂ ದೇವಾಲಯಗಳ ನಿರ್ವಹಣಾ ಸೇವಾ ಟ್ರಸ್ಟ್(ರಿ). ಅಧ್ಯಕ್ಷರು ಹಾಗೂ ‘ಶಿಮುಲ್’ ಜಿಲ್ಲಾ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿರವರು ಪ್ರಥಮ ವರ್ಷದ ಧ್ವಜಾರೋಹಣ ನೆರವೇರಿಸಿದರು. ಸಂಜೆ ಕಾರ್ಯಕ್ರಮದ ದೀಪ ಬೆಳಗಿಸುವುದರ ಮೂಲಕ ಚಳ್ಳಕೆರೆಯ ಮುತ್ತುರಾಜ್ ಮೆಲೋಡಿಸ್ ರವರಿಂದ ಹಾಡುಗಾರಿಕೆಯನ್ನು ಚಾಲನೆಗೊಳಿಸಿ. ಕನ್ನಡ ಉಳಿವು ಅಳಿವಿನ ಬಗ್ಗೆ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಶಿವಲಿಂಗಪ್ಪ ರವರು ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದ ಪ್ರಾಯೋಜಕರಾದ ಮೂರ್ತಿ ಗ್ರೂಪ್ಸ್ &ಡೆವಲಪ್ಪರ್ಸ್ ಬಿ.ಸಿ. ಸಂಜೀವ್ ಮೂರ್ತಿ ಹಾಗೂ ಸಹೋದರರಿಂದ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಬೆಸ್ಕಾಂ ಹಾಗು ಗ್ರಾಮ ಪಂಚಾಯಿತಿ ಸಿಬ್ಬಂದಿ. ಆಶಾ ಕಾರ್ಯಕರ್ತರು ಆಟೋ ಚಾಲಕರು ವಾಟ್ರರ್ಮೆನ್ಸ್ ಸಿಬ್ಬಂದಿ ವರ್ಗದವರೆಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಗಳಮ್ಮ ರಂಗಸ್ವಾಮಿ. ಚಳ್ಳಕೆರೆ ನೃತ್ಯನಿಕೇತನ ತಂಡದ ವ್ಯವಸ್ಥಾಪಕರಾದ ಯು. ವಿಷ್ಣುಮೂರ್ತಿರಾವ್ ,ನರಹರಿನಗರ ಡೈರಿ ನಿರ್ದೇಶಕರಾದ ಕಾರ್ತಿಕ್ ಎಸ್.ಮೂರ್ತಿ ಮತ್ತು ನಿರಂಜನಮೂರ್ತಿ.ಗ್ರಾಮದ ಮುಖಂಡರು ಅಜ್ಮಿತ್ಉಲ್ಲಾ ಮಾಸ್ಟರ್ ಬೋರಣ್ಣ.ಶಾಂತಣ್ಣ. ದ್ಯಾಮಣ್ಣ. ಸಂಜೀವಪ್ಪ. ರುದ್ರಣ್ಣ ಹಾಗೂ ಗ್ರಾಮಸ್ಥರಾದ ಶಿವಪ್ರಕಾಶ್ ರಮೇಶ್ ಮಂಜುನಾಥ್ ಚಂದ್ರಪ್ಪ ತಿಪ್ಪೇಸ್ವಾಮಿ ಹಾಗೂ ನರಹರಿ ನಗರ ಹಾಗೂ ಗಾನಪ್ಪನಟ್ಟಿ. ದಾಸ ನಾಯಕನಹಟ್ಟಿ ಗ್ರಾಮಸ್ಥರಿದ್ದರು. ಕಕಾರ್ಯಕ್ರಮದ
ನಿರೂಪಣೆಯನ್ನು ಸಂಜೀವಿನಿ ಲ್ಯಾಬ್ ಮೃತ್ಯುಂಜಯ ರವರು ವಹಿಸಿದ್ದರು. ಎಲ್ಲಾ ಮಹನೀಯರಿಗೂ ಊಟದ ವ್ಯವಸ್ಥೆಯನ್ನು ಮೂರ್ತಿ ಗ್ರೂಪ್& ಡೆವೆಲಪರ್ಸ್ ರವರಿಂದ ವ್ಯವಸ್ಥೆ ಮಾಡಲಾಗಿತ್ತು.

