ಚಳ್ಳಕೆರೆ :

ಯುಗಾದಿ ಮತ್ತು ರಂಜಾನ್ ಹಬ್ಬಗಳು ಇರುವ ಕಾರಣದಿಂದಾಗಿ ಯಾವುದೆ ರೀತಿಯ ಅಹಿತಕರ ಘಟನೆಗಳು ನಡೆಯದ ಹಾಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಡಿವೈಎಸ್ ಪಿ ಬಿಟಿ.ರಾಜಣ್ಣ ಹೇಳಿದರು.

ಅವರು ನಗರದ ಪೊಲೀಸ್ ಠಾಣೆ ಆವರಣದಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಆಯೋಜಿಸಿದ್ದ ಪೋಲೀಸ್ ಸೂಚನೆಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು,
ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರುಗಳು ಹಿಂದೂ ಹಾಗೂ ಮುಸ್ಲಿಂ ಹಬ್ಬಗಳನ್ನು ಶಾಂತಿ ರೀತಿಯಿಂದ ಆಚರಿಸಿ ಮತ್ತು ಯಾವುದೆ ರೀತಿಯ ಜೂಜಾಟ ಆಡುವುದನ್ನು ನಿಷೇಧಿಸಲಾಗಿದೆ, ಇದನ್ನು ಮೀರಿ ಜೂಜಡಲು ಮುಂದಾದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು,

ಪಿಎಸ್ಐ ಶಿವರಾಜ್ ,
ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಹಾಗೂ ಕರ್ನಾಟಕ ಯುವರಕ್ಷಣಾ ವೇದಿಕೆಯ ನಗರ ಅಧ್ಯಕ್ಷ ಮಾರುತಿ ಮಾತನಾಡಿದರು.

ಇದೇ ಸಂಧರ್ಭದಲ್ಲಿ ಗುರುರಾಜ್, ಮಂಜುನಾಥ್, ಶ್ರೀನಿವಾಸ್, ರಂಗಸ್ವಾಮಿ, ಮಂಜುನಾಥ್, ಉಪೇಂದ್ರ, ಆದಿತ್ಯ, ಸೈಯದ್, ಮುಂತಾದವರು ಉಪಸ್ಥಿತಿಯಲ್ಲಿದ್ದರು

About The Author

Namma Challakere Local News
error: Content is protected !!