ಗ್ಯಾಸ್ ಸೋರಿಕೆ ಗೃಹಪಯೋಗಿ ವಸ್ತುಗಳು ಸುಟ್ಟು ಭಸ್ಮ….

ಚಳ್ಳಕೆರೆ

ಸಿಲೆಂಡರ್ ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿ ಉರಿದು ಮನೆಯಲ್ಲಿ ಇದ್ದಂತಹ ವಸ್ತುಗಳೆಲ್ಲವೂ ಸುಟ್ಟಿರುವ ಘಟನೆ ಇಂದು ನಡೆದಿದೆ.

ಚಳ್ಳಕೆರೆ ನಗರದ ಗಾಂಧಿನಗರದ ಮಹಮದ್ ರಫಿ ಎನ್ನುವವರ ಮನೆಯಲ್ಲಿ ಈ ಘಟನೆ ನಡೆದಿದ್ದು . ಮನೆಯಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು ಮನೆಯಲ್ಲಿದ್ದ ಟಿವಿ. ಫ್ರಿಡ್ಜ್,,ಬೀರುವಿನಲ್ಲಿದ್ದ ಬಟ್ಟೆಗಳು ಹಾಗೂ ಗೃಹ ಉಪಯೋಗಿ ವಸ್ತುಗಳು ಸುಟ್ಟಿದ್ದು ಸಲ್ಮ ಬಾನು ಎನ್ನುವ ಮಹಿಳೆಗೆ ಸ್ವಲ್ಪಮಟ್ಟಿನ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಆಗಮಿಸಿ ಮನೆಯಲ್ಲಿ ಒತ್ತಿ ಉರಿತಿದ್ದ ಬೆಂಕಿಯನ್ನು ಆರಿಸಲು ಹರ ಸಹಾಸ ಮಾಡಲಾಯಿತು . ಈ ವೇಳೆ ಸಾರ್ವಜನಿಕರು ಸಹ ಈ ಕಾರ್ಯದಲ್ಲಿ ಭಾಗಿಯಾದರು ಅಗ್ನಿಶಾಮಕ ದಳದ ಸಿಬ್ಬಂದಿ ಸರಿಯಾದ ಸಮಯಕ್ಕೆ ಆಗಮಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು ಮನೆಯಲ್ಲಿದ್ದಂತಹ ಗೃಹಪಯೋಗಿ ವಸ್ತುಗಳೆಲ್ಲವೂ ಸುಟ್ಟು ಬಸ್ಮವಾಗಿವೆ.

About The Author

Namma Challakere Local News
error: Content is protected !!