ಚಳ್ಳಕೆರೆ : ಸರ್ಕಾರದ ದ್ವಂದ್ವ ನಿಲುವುಗಳು ರೈತರಿಗೆ ಮಾರಕವಾಗಿವೆ, ದೇಶಕ್ಕೆ ಬೆನ್ನೆಲುಬಾಗಿ ಅನ್ನ ನೀಡುವಂತಹ ರೈತನಿಗೆ ಸ್ಮಾರ್ಟ್ ಮೀಟರ್ ಎಂಬ ಹೆಸರಿನಲ್ಲಿ ವಿದ್ಯುತ್ತನ್ನು ನೀಡಿ ದುಬಾರಿ ಹಣವನ್ನು ಕಟ್ಟಿಸಿಕೊಳ್ಳುತ್ತಿರುವಂತಹ ಈ ಸ್ಮಾರ್ಟ್ ಮೀಟರ್ ನಮಗೆ ಬೇಡ ರೈತರಿಗೆ ಉಚಿತವಾಗಿ ವಿದ್ಯುತ್ ನೀಡಿ ದೇಶಕ್ಕೆ ಅನ್ನ ನೀಡುವ ರೈತನಿಗೆ ಮೀಟರ್ ಮೂಲಕ ಹಣ ಪಡೆಯುವುದು ಯಾವ ನ್ಯಾಯ ಆದ್ದರಿಂದ ಈ ಕೂಡಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸ್ಮಾರ್ಟ್ ಮೀಟರ್ ಎಂಬ ದಂದೆಯನ್ನು ಈ ಕೂಡಲೇ ಹಿಂಪಡೆಯಬೇಕು ಯಾವುದೇ ರೈತನಿಗೆ ಸ್ಮಾರ್ಟ್ ಮೀಟರ್ ಅಳವಡಿಸದೆ ಉಚಿತವಾಗಿ ವಿದ್ಯುತ್ತನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ನೂರಾರು ರೈತರೊಟ್ಟಿಗೆ ಬೆಸ್ಕಾಂ ಅಧಿಕಾರಿ ಶಿವಪ್ರಸಾದ್ ರವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ನೂರಾರು ಪ್ರತಿ ಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

