ಚಳ್ಳಕೆರೆ :
ಹೊಳಲ್ಕೆರೆ: ಸಮರ್ಪಕ ವಿದ್ಯುತ್ ಗಾಗಿ ರೈತರ
ಪ್ರತಿಭಟನೆ
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ವಿವಿಧ ಗ್ರಾಮಗಳ ರೈತರು
ಹೊಳಲ್ಕೆರೆಯ ಚಿಕ್ಕಜಾಜೂರು ಬೆಸ್ಕಾಂ ಶಾಕಾ ಕಚೇರಿ ಎದುರು
ಇಂದು ಪ್ರತಿಭಟನೆ ನಡೆಸಿದರು. ಸಮೀಪದ ಟಿ ತಿರುಮಲಾಪುರ
ಅಮೃತಪುರ ಗೌರಿಪುರ ಕಾಶಿಪುರ ಬಿಜೇನಾಳ್ ಲಿಂಗನಹಳ್ಳಿ
ಮೊದಲಾದ ಗ್ರಾಮಗಳಿಗೆ 15 ದಿನಗಳಿಂದ ಸಮರ್ಪಕ ವಿದ್ಯುತ್
ಪೂರೈಕೆ ಆಗುತ್ತಿಲ್ಲ.
ಈ ಬಗ್ಗೆ ಮನವಿ ಮಾಡಿದರೂ ಇಂಜಿನಿಯರ್
ಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಬಿಸಿಲಿನ ತಾಪ
ಹೆಚ್ಚಾಗುತ್ತಿರುವುದರಿಂದ ರೈತರ ತೋಟಗಳು ಒಣಗುತ್ತಿವೆ
ಎಂದಿದ್ದಾರೆ.

