“ಶ್ರೀಶಾರದಾಶ್ರಮದ ಸದ್ಭಕ್ತರಿಂದ ಬೆಳಕು ಶಾಲೆಗೆ ಲೇಖನಿ ಸಾಮಗ್ರಿಗಳ ವಿತರಣೆ ಶ್ಲಾಘನೀಯ”-ಮುಖ್ಯ ಶಿಕ್ಷಕ ರಾಮಾಂಜನೇಯ
ಚಳ್ಳಕೆರೆ-ನಗರದ ನಾಯಕನಹಟ್ಟಿ ರಸ್ತೆಯ ವೆಂಕಟೇಶ್ವರ ನಗರದಲ್ಲಿರುವ ಬೆಳಕು ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಗೆ ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಪ್ರಿಯಾಂಕ ಮತ್ತು ಪವನ್ ಕುಮಾರ್ ಅವರು ಲೇಖನಿ ಸಾಮಗ್ರಿಗಳನ್ನು ವಿತರಿಸುತ್ತಿರುವುದು ತುಂಬಾ ಶ್ಲಾಘನೀಯ ಸೇವೆ ಎಂದು ಶಾಲೆಯ ಮುಖ್ಯ ಶಿಕ್ಷಕ ಬಿ. ರಾಮಾಂಜನೇಯ ತಿಳಿಸಿದರು.
ಸ್ವಾಮಿ ವಿವೇಕಾನಂದರ ತ್ಯಾಗ ಮತ್ತು ಸೇವೆಯ ಆದರ್ಶವನ್ನು ಶ್ರೀಶಾರದಾಶ್ರಮದ ಸದ್ಭಕ್ತರು ಪಾಲಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿ-ನಗರದ ಶ್ರೀಶಾರದಾಶ್ರಮದ ಮೂಲಕ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಶೈಕ್ಷಣಿಕವಾಗಿಯೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತ ಬರುತ್ತಿದೆ,ಇದನ್ನು ಶಿಕ್ಷಣ ಸಂಸ್ಥೆಗಳು ಸಮರ್ಥವಾಗಿ ಬಳಸಿಕೊಂಡು ಮುಂದುವರಿಯುವ ಅಗತ್ಯವಿದೆ ಎಂದು ಶ್ರೀಶಾರದಾಶ್ರಮದ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಬೇಕಾಗುವ ನೋಟ್ ಬುಕ್, ಪೆನ್ನು, ಪೆನ್ಸಿಲ್, ಹಣ್ಣು ಹಾಗೂ ಸಿಹಿ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ, ಪ್ರಿಯಾಂಕ,ಯತೀಶ್ ಎಂ ಸಿದ್ದಾಪುರ, ಶಿಕ್ಷಕರಾದ ಮಂಜುನಾಥ, ನಾಗರಾಜ್, ರಾಜಣ್ಣ, ಶ್ರೀನಿವಾಸ್ , ಉಮಾದೇವಿ, ಭೀಮಪ್ಪ,ಖಾಸಿಂ, ಮೂರ್ತಿ,ಸೇರಿದಂತೆ ಸಿಬ್ಬಂದಿ ವರ್ಗದವರಿದ್ದರು.

